ಮಂಗಳೂರು: ಕೊರೊನಾ ಪ್ರಕರಣದಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣ: ತಾಲೂಕಿನಲ್ಲಿ ಶೇ.71 ಕೇಸ್ ದಾಖಲು - Dakshina Kannada corona news
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 6,168 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4,394 ಪ್ರಕರಣಗಳು ಮಂಗಳೂರು ತಾಲೂಕಿಗೆ ಸೇರಿದ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 71.23 ಶೇ. ಕೇಸ್ಗಳು ಮಂಗಳೂರು ತಾಲೂಕಿನಲ್ಲೇ ಪತ್ತೆಯಾಗಿದೆ ಎಂಬುದೇ ಆತಂಕಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 6,168 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4,394 ಪ್ರಕರಣಗಳು ಮಂಗಳೂರು ತಾಲೂಕಿಗೆ ಸೇರಿದ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 71.23 ಶೇ. ಕೇಸ್ಗಳು ಮಂಗಳೂರು ತಾಲೂಕಿನಲ್ಲೇ ಪತ್ತೆಯಾಗಿದೆ ಎಂಬುದೇ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಿನ್ನೆ ಪತ್ತೆಯಾದ 153 ಕೊರೊನಾ ಪ್ರಕರಣಗಳಲ್ಲಿ 119 ಪ್ರಕರಣಗಳು ಮಂಗಳೂರು ತಾಲೂಕಿನಲ್ಲಿ ಪತ್ತೆಯಾಗಿದೆ. ಕೊರೊನಾದಿಂದ ಈವರೆಗೆ 176 ಸಾವಿನ ಪ್ರಕರಣ ವರದಿಯಾಗಿದ್ದು, ನಿನ್ನೆ ಒಂದೇ ದಿನ 7 ಮಂದಿ ಸಾವನ್ನಪ್ಪಿದ್ದರು. ಈ 7 ಮಂದಿ ಕೂಡ ಮಂಗಳೂರು ತಾಲೂಕಿನವರಾಗಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣದಲ್ಲಿ ಮಂಗಳೂರು ತಾಲೂಕಿನವರೇ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.