ಮಂಗಳೂರು :ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಸೋಂಕು ಹರಡದಂತೆ ತಲಪಾಡಿ ಗಡಿ ದಾಟಿ ಯಾರೂ ಕೇರಳದಿಂದ ಬರದಂತೆ ಗಡಿಯನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಪೂರ್ತಿ ಬಂದ್ ಮಾಡಲಾಗಿದೆ. ಆದರೆ, ಈ ನಡುವೆ ಗಡಿ ದಾಡಿ ಬಂದ ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆಯಲಾಗಿದೆ.
ದೋಣಿ ಮೂಲಕ ಕೇರಳ ಗಡಿ ದಾಟಿ ಬಂದ 7 ಮಂದಿ ಬಂಧನ.. ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರೆಂಟೈನ್! - ಕಾಸರಗೋಡು
ಗಡಿ ದಾಟಿ ಬಂದಿರುವ ಇವರನ್ನು 14 ದಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ದೋಣಿ ಮತ್ತು ಏಳು ಜನರನ್ನು ಮಂಗಳೂರು ತಲುಪಿಸಿದವರ ಕುರಿತು ತನಿಖೆ ನಡೆಯುತ್ತಿದೆ.
ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ದಾರೆ ಎಂಬ ಆರೋಪದ ಮೇರೆಗೆ 7 ಜನರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಕೇರಳದಿಂದ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇರೆಗೆ ಯಾಕೂಬ್ (48) ಮತ್ತು ಆತನ ಕುಟುಂಬದ 6 ಜನರು ಬಂಧನಕ್ಕೊಳಕ್ಕಾಗಿದ್ದಾರೆ. ಯಾಕೂಬ್ ಹಾಗೂ ಆತನ ಸಂಗಡಿಗರಿಗೆ ತಲಪಾಡಿ ಗಡಿ ದಾಟಲು ಸಹಾಯ ಮಾಡಿದವನು ಶಾಕೀರ್ ಎಂದು ಆರೋಪಿಗಳು ಒಪ್ಪಿದ್ದಾರೆ.
ಇವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಗಡಿ ದಾಟಿ ಬಂದಿರುವ ಇವರನ್ನು 14 ದಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ದೋಣಿ ಮತ್ತು ಏಳು ಜನರನ್ನು ಮಂಗಳೂರು ತಲುಪಿಸಿದವರ ಕುರಿತು ತನಿಖೆ ನಡೆಯುತ್ತಿದೆ. ಇವರಿಗೆ ಸಹಾಯ ಮಾಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.