ಕರ್ನಾಟಕ

karnataka

ETV Bharat / state

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಆನ್​​ಲೈನ್​​ನಲ್ಲಿ ಹಣ ಹೂಡುತ್ತಿದ್ದ 6 ಬುಕ್ಕಿಗಳು ವಶಕ್ಕೆ - ಐಪಿಎಲ್​ ಬೆಟ್ಟಿಂಗ್

ಆರೋಪಿಗಳು ಸ್ಟಾರ್ ಆ್ಯಪ್ ಹಾಗೂ ಲೋಟಸ್ ಬುಕ್247 ಬೆಟ್ಟಿಂಗ್ ಆ್ಯಪ್​​​ನಲ್ಲಿ ಬೇರೆಯವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆನ್​ಲೈನ್​​​​ ಮೂಲಕ ಹಣ ಸಂಗ್ರಹಿಸಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು ಎಂಬುದು ತಿಳಿದು ಬಂದಿದೆ..

6-persons-detained-for-ipl-betting-at-mangalore
ಆನ್​​ಲೈನ್​​ನಲ್ಲಿ ಹಣ ಹೂಡುತ್ತಿದ್ದ 6 ಬುಕ್ಕಿಗಳು ವಶಕ್ಕೆ

By

Published : May 4, 2021, 10:42 PM IST

ಮಂಗಳೂರು : ಆನ್​​​​ಲೈನ್​​ ಮೂಲಕ ಹಣ ಸಂಗ್ರಹಿಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 6 ಬುಕ್ಕಿಗಳನ್ನು ಮಂಗಳೂರಿನ ಸಿಸಿಬಿ ಹಾಗೂ ಇಎನ್​ಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ವಿಚಾರಣೆಗಾಗಿ ಪೊಲೀಸ್ ಕಷ್ಟಡಿಗೆ ಒಪ್ಪಿಸಿದೆ.

ಮಂಗಳೂರಿನ ಕುಂಪಲ ನಿವಾಸಿ ವಿಕ್ರಂ, ಕೃಷ್ಣಾಪುರ ನಿವಾಸಿ ಧನಪಾಲ್ ಶೆಟ್ಟಿ, ರಾಜಸ್ಥಾನ ಮೂಲದ ಸುರತ್ಕಲ್ ನಿವಾಸಿ ಕಮಲೇಶ್, ಮುಂಬೈ ನಿವಾಸಿ ಹರೀಶ್ ಶೆಟ್ಟಿ, ಅಶೋಕನಗರ ನಿವಾಸಿ ಪ್ರೀತೇಶ್, ಉರ್ವ ಮಾರಿಗುಡಿ ನಿವಾಸಿ ಅವಿನಾಶ್ ಎಂಬುವರು ಆರೋಪಿಗಳಾಗಿದ್ದಾರೆ.

ಆನ್​​ಲೈನ್​​ನಲ್ಲಿ ಹಣ ಹೂಡುತ್ತಿದ್ದ 6 ಬುಕ್ಕಿಗಳು ವಶಕ್ಕೆ..

ಆರೋಪಿಗಳು ಸ್ಟಾರ್ ಆ್ಯಪ್ ಹಾಗೂ ಲೋಟಸ್ ಬುಕ್247 ಬೆಟ್ಟಿಂಗ್ ಆ್ಯಪ್​​​ನಲ್ಲಿ ಬೇರೆಯವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆನ್​ಲೈನ್​​​​ ಮೂಲಕ ಹಣ ಸಂಗ್ರಹಿಸಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಕ್ಸಿಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಹಾಗೂ ಹೆಚ್​​​ಡಿಎಫ್​​ಸಿ ಬ್ಯಾಂಕ್​​ಗಳ ಸುಮಾರು 20 ಖಾತೆಗಳನ್ನು ಮುಟ್ಟುಗೋಲು ಹಾಕಿ 20ಲಕ್ಷ ರೂ. ನಗದು ಹಾಗೂ ಆನ್​ಲೈನ್​​​​ ಬೆಟ್ಟಿಂಗ್ ಆಡಲು ಉಪಯೋಗಿಸುತ್ತಿದ್ದ 10 ಮೊಬೈಲ್ ಫೋನ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details