ಮಂಗಳೂರು:ನಗರದಲ್ಲಿ ತಿಮಿಂಗಿಲ ವಾಂತಿ(ಅಂಬರ್ ಗ್ರೀಸ್)ಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಆರು ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪ್ರಶಾಂತ್ ( 24), ಬೆಂಗಳೂರಿನ ಸತ್ಯರಾಜ್(32), ಮಂಗಳೂರಿನ ತೆಂಕೆ ಎಡಪದವು ಗ್ರಾಮದ ರೋಹಿತ್ (27), ಮಂಗಳೂರಿನ ಅಡ್ಡೂರು ಗ್ರಾಮದ ರಾಜೇಶ್ (37), ಮಂಗಳೂರಿನ ತೆಂಕೆ ಎಡಪದವು ಗ್ರಾಮದ ವಿರೂಪಾಕ್ಷ, ಉಡುಪಿ ಜಿಲ್ಲೆಯ ಕಾಪುವಿನ ನಾಗರಾಜ್ (31) ಬಂಧಿತರು.
ಇವರಿಂದ 3.48 ಕೋಟಿ ರೂ. ಮೌಲ್ಯದ 3 ಕೆಜಿ 480 ಗ್ರಾಂ. ತಿಮಿಂಗಿಲ ವಾಂತಿ ವಶಪಡಿಸಿಕೊಳ್ಳಲಾಗಿದೆ. ಇವರು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬಾತ ನೀಡಿದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಯನ್ನು ಮಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಇವರನ್ನು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನವೋದಯ ಶಾಲೆಯ ಬಳಿ ಪೊಲೀಸರು ಬಂಧಿಸಿ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಓದಿ:Hijab Row: ಅರ್ಜಿ ವಿಚಾರಣೆ ಪುನರಾರಂಭಿಸಿದ ಹೈಕೋರ್ಟ್