ಕರ್ನಾಟಕ

karnataka

ETV Bharat / state

ಸೈನಿಕನೆಂದು ನಂಬಿಸಿ ವ್ಯಕ್ತಿಗೆ ₹51 ಸಾವಿರ ಪಂಗನಾಮ ಹಾಕಿದ ಚಾಲಾಕಿ!! - 51 thousand fraud from a person

ಮುಂಗಡ ಹಣ ಕಳುಹಿಸುವಂತೆ ಈತನಿಗೆ ತಿಳಿಸಿ ಮೊದಲು ₹3 ಸಾವಿರ ಪಡೆದು ಆರ್‌ಸಿ ವರ್ಗಾಯಿಸಲು ಆಧಾರ್ ಕಾರ್ಡ್ ಕೇಳಿದ್ದಾನೆ. ನಂತರ ಬೇರೆ ಬೇರೆ ರೀತಿಯಲ್ಲಿ ₹51,300 ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಇಷ್ಟಾದರೂ ದ್ವಿಚಕ್ರ ವಾಹನ ಸಿಗದೇ ಇರುವುದರಿಂದ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ..

ಸೈನಿಕನೆಂದು ನಂಬಿಸಿ ವ್ಯಕ್ತಿಗೆ 51 ಸಾವಿರ ಪಂಗನಾಮ ಹಾಕಿದ ಚಾಲಕಿ!
ಸೈನಿಕನೆಂದು ನಂಬಿಸಿ ವ್ಯಕ್ತಿಗೆ 51 ಸಾವಿರ ಪಂಗನಾಮ ಹಾಕಿದ ಚಾಲಕಿ!

By

Published : Jun 23, 2021, 10:09 PM IST

Updated : Jun 23, 2021, 10:57 PM IST

ಮಂಗಳೂರು :ಮಂಗಳೂರಿನ ವ್ಯಕ್ತಿಯೊಬ್ಬರಿಗೆ ತಾನೊಬ್ಬ ಸೈನಿಕನೆಂದು ನಂಬಿಸಿದ ವ್ಯಕ್ತಿಯೊಬ್ಬ 51,300 ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶ್ರೀನಿವಾಸ್ ಎಂಬಾತ ಹೋಂಡಾ ಡಿಯೋ ವಾಹನವನ್ನು ₹23,000ಗೆ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ. ಇದನ್ನು ನೋಡಿ ಮಂಗಳೂರಿನ ವ್ಯಕ್ತಿ ಆತನ ಜೊತೆಗೆ ಮಾತನಾಡಿ ₹18 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದ.

ಇದೇ ವೇಳೆ ಶ್ರೀನಿವಾಸ್ ತಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ಯೂನಿಫಾರ್ಮ್‌ನಲ್ಲಿದ್ದ ಫೋಟೋ ಮತ್ತು ಕಚೇರಿ ಎಂದು ಮತ್ತೊಂದು ಫೋಟೋವನ್ನು ಮಂಗಳೂರಿನ ವ್ಯಕ್ತಿಗೆ ಕಳುಹಿಸಿ ತಾನು ಸೈನಿಕನೆಂದು ನಂಬಿಸಿದ್ದ.

ಮುಂಗಡ ಹಣ ಕಳುಹಿಸುವಂತೆ ಈತನಿಗೆ ತಿಳಿಸಿ ಮೊದಲು ₹3 ಸಾವಿರ ಪಡೆದು ಆರ್‌ಸಿ ವರ್ಗಾಯಿಸಲು ಆಧಾರ್ ಕಾರ್ಡ್ ಕೇಳಿದ್ದಾನೆ. ನಂತರ ಬೇರೆ ಬೇರೆ ರೀತಿಯಲ್ಲಿ ₹51,300 ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಇಷ್ಟಾದರೂ ದ್ವಿಚಕ್ರ ವಾಹನ ಸಿಗದೇ ಇರುವುದರಿಂದ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ವ್ಯಕ್ತಿ ಪ್ರಕರಣ ದಾಖಲಿಸಿದ್ದಾರೆ.

ಓದಿ:ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷೆ: ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ

Last Updated : Jun 23, 2021, 10:57 PM IST

ABOUT THE AUTHOR

...view details