ETV Bharat Karnataka

ಕರ್ನಾಟಕ

karnataka

ETV Bharat / state

8 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣ: ಕಠಿಣ ಶಿಕ್ಷೆಗೆ ಒತ್ತಾಯಿಸಿ 4ನೇ ತರಗತಿ ಬಾಲಕಿಯಿಂದ ಕಮಿಷನರ್​​ಗೆ ಮನವಿ - 8 years old girl rape case updates

ಮಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕೆಂದು ನಾಲ್ಕನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪೊಲೀಸ್​ ಕಮಿಷನರ್​ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾಳೆ.

4th standard girl Appeals to police Commissioner that  harsh punishment for rape accused
4ನೇ ತರಗತಿ ಬಾಲಕಿಯಿಂದ ಕಮಿಷನರ್​​ಗೆ ಮನವಿ
author img

By

Published : Nov 25, 2021, 4:56 PM IST

ಮಂಗಳೂರು; ಮಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮನುಷತ್ವವನ್ನೇ ಪ್ರಶ್ನಿಸುವಂತ ಘಟನೆಯಾಗಿದೆ. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕೆಂದು ನಾಲ್ಕನೆ ತರಗತಿಯ ಬಾಲಕಿಯೊಬ್ಬಳು ಇಲ್ಲಿನ ಮಹಾನಗರ ಪೊಲೀಸ್​ ಆಯುಕ್ತ ಶಶಿಕುಮಾರ್​ ಎನ್​ ಅವರಿಗೆ ಮನವಿ ಮಾಡಿದ್ದಾಳೆ.

ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಬಾಲಕಿ ಮನವಿ

ಇತ್ತೀಚೆಗೆ ಉಳಾಯಿಬೆಟ್ಟು ಎಂಬಲ್ಲಿ 8 ವರ್ಷದ ಬಾಲಕಿಯೊಬ್ಬಳ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆದಿತ್ತು. ಈ ಪ್ರಕರಣ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿತ್ತು. ಕೇಸ್​ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಅದರಂತೆ ಮಂಗಳೂರಿನ ಕುಳಾಯಿಯ ನಿರಂಜನ್ ಮತ್ತು ಪವಿತ್ರ ಎಂಬವರ‌ ಮಗಳಾದ ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೆ ತರಗತಿಯಲ್ಲಿ ಕಲಿಯುತ್ತಿರುವ ಚಾರ್ವಿ ನಿರಂಜನ್ ಕೂಡ ಪೊಲೀಸ್ ಕಮಿಷನರ್ ಅನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾಳೆ.

ಮನವಿ ಪತ್ರ

ಇದನ್ನೂ ಓದಿ:ಮಂಗಳೂರು : ಬಾಲಕಿಯ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

''ಮಂಗಳೂರು ಉಳಾಯಿಬೆಟ್ಟು ಸಮೀಪದ ಪರಾರಿಯಲ್ಲಿರುವ ಹಂಚಿನ ಕಾರ್ಖಾನೆಯ ಬಳಿ ಚರಂಡಿಯಲ್ಲಿ ಪತ್ತೆಯಾದ 8 ವರ್ಷದ ಬಾಲಕಿಯ ಮೃತದೇಹ ಹಾಗೂ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಸಿಲುಕಿದ ಆರೋಪಿಗಳ ಬಂಧನವಾಗಿದ್ದು ಸದರಿ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ. ಇನ್ನಾದರೂ ಸಣ್ಣ ಹೆಣ್ಣು ಮಕ್ಕಳ ಮೇಲೆ ಇಂತಹ ಘಟನೆಗಳು ಮರುಕಳಿಸದಂತೆ ಕೇಳಿಕೊಳ್ಳುತ್ತೇನೆ'' ಎಂದು ಮನವಿ ಪತ್ರದಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ.

ABOUT THE AUTHOR

...view details