ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ: 448 ಕೊರೊನಾ ಪ್ರಕರಣಗಳು ಪತ್ತೆ, ಆರು ಮಂದಿ ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಕೋವಿಡ್‌ ಸೋಂಕಿತ ಪ್ರಕರಣಗಳು, ಗುಣಮುಖರಾದವರು ಹಾಗು ಮೃತಪಟ್ಟವರೂ ಸೇರಿದಂತೆ ಇಂದಿನ ಕೋವಿಡ್‌ ಬುಲೆಟಿನ್‌ ಹೀಗಿದೆ.

Dakshina Kannada corona cases
Dakshina Kannada corona cases

By

Published : Aug 28, 2020, 7:52 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಕೊರೊನಾ ವೈರಸ್‌ ಸೋಂಕಿಗೆ 6 ಮಂದಿ ಮೃತಪಟ್ಟಿದ್ದಾರೆ.

ಕೊರೊನಾದಿಂದ ಇಂದು ಮೃತಪಟ್ಟ 6 ಮಂದಿಯಲ್ಲಿ ಮೂವರು ಮಂಗಳೂರು ತಾಲೂಕು, ಒಬ್ಬರು ಬಂಟ್ವಾಳ, ಇನ್ನೊಬ್ಬರು ಪುತ್ತೂರು ಮತ್ತು ಒಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ.

ಸೋಂಕಿತರ ವಿವರ:

ಜಿಲ್ಲೆಯಲ್ಲಿ ಇಂದು 448 ಮಂದಿಗೆ ಕೊರೊನಾ ದೃಢಪಟ್ಟಿದ್ದು, 273 ಮಂದಿ ಮಂಗಳೂರು ತಾಲೂಕು, 103 ಮಂದಿ ಬಂಟ್ವಾಳ, 27 ಮಂದಿ ಪುತ್ತೂರು, 17 ಮಂದಿ ಸುಳ್ಯ, 18 ಮಂದಿ ಬೆಳ್ತಂಗಡಿ ಮತ್ತು 10 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 11,837 ಮಂದಿಗೆ ಕೊರೊನಾ ದೃಢಪಟ್ಟಿದೆ.

ಗುಣಮುಖ:

ಇಂದು 293 ಮಂದಿ ಗುಣಮುಖರಾಗಿದ್ದು, ಈವರೆಗೆ 8,973 ಸೋಂಕಿತರು ಕೊರೊನಾ ಜಯಿಸಿದ್ದಾರೆ. ಸದ್ಯ 2,521 ಮಂದಿ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details