ಕರ್ನಾಟಕ

karnataka

ETV Bharat / state

ಮಂಗಳೂರು.. ಆಸ್ಪತ್ರೆಗೆ ದಾಖಲಾಗಲು ಹೊರಟ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ.. - ಪ್ರಶಾಂತ್ ಕೊಟ್ಟಾರಿ ಶವ ಪತ್ತೆ

ಕಾರಿನಲ್ಲಿ ಎಸಿ ಹಾಕಿ, ಗ್ಲಾಸ್ ಮುಚ್ಚಿ ಮಲಗಿದ್ದ ಪರಿಣಾಮ ಅವರು ಉಸಿರುಗಟ್ಟಿ ಮೃತಪಟ್ಟಿರಬಹುದೆಂದು‌ ಶಂಕಿಸಲಾಗಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಹಜರು ನಡೆಸಲು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

dead-body-found-in-car-at-mangalore
ಕಾರಿನಲ್ಲಿ ಶವವಾಗಿ ವ್ಯಕ್ತಿ ಪತ್ತೆ

By

Published : Nov 12, 2021, 8:28 PM IST

ಮಂಗಳೂರು :ನಗರದ ಕಂಕನಾಡಿ(kankanadi)ಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯೋರ್ವರ ಮೃತ ದೇಹ (Dead body) ಪತ್ತೆಯಾಗಿದೆ.

ಮೃತವ್ಯಕ್ತಿಯನ್ನು ಮಣ್ಣಗುಡ್ಡ ನಿವಾಸಿ ಪ್ರಶಾಂತ್ ಕೊಟ್ಟಾರಿ (Prashanth Kottari) (44) ಎಂದು ಗುರುತಿಸಲಾಗಿದೆ. ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಯ ವೇಳೆಗೆ ಸಾರ್ವಜನಿಕರು ಕಾರನ್ನು ನೋಡಿದ್ದಾರೆ. ಆಗ ಮೃತ ದೇಹ ಪತ್ತೆಯಾಗಿದೆ. ನಂತರ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಪ್ರಶಾಂತ್ ಕೊಟ್ಟಾರಿ ಅವರು ಕುಡಿತದ ಚಟ ಹೊಂದಿದ್ದು, ಅನಾರೋಗ್ಯ ಪೀಡಿತರಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದ ಅವರು, ವೈದ್ಯರಲ್ಲಿಗೆ ತಪಾಸಣೆಗೆ ಹೋಗಿದ್ದರು. ಈ ಸಂದರ್ಭ ಅವರಿಗೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಾಗುವುದಾಗಿ ಮನೆಯಲ್ಲಿ ಹೇಳಿ 50 ಸಾವಿರ ರೂ. ನಗದು ತೆಗೆದುಕೊಂಡು ನಿನ್ನೆ ಸಂಜೆ ಕಾರಿನಲ್ಲಿ ತೆರಳಿದ್ದರು. ಆದರೆ, ಇಂದು ಅವರು ತಮ್ಮ ಇಕೋ ಸ್ಪೋರ್ಟ್ ಕಾರಿ‌ನ ಒಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೇ? ಅನ್ನೋದು ಇನ್ನಷ್ಟೇ ತಿಳಿಯಬೇಕಾಗಿದೆ.

ಕಾರಿನಲ್ಲಿ ಎಸಿ ಹಾಕಿ, ಗ್ಲಾಸ್ ಮುಚ್ಚಿ ಮಲಗಿದ್ದ ಪರಿಣಾಮ ಅವರು ಉಸಿರುಗಟ್ಟಿ ಮೃತಪಟ್ಟಿರಬಹುದೆಂದು‌ ಶಂಕಿಸಲಾಗಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಹಜರು ನಡೆಸಲು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಗ್ರಾಮದ ಸಮಸ್ಯೆ ಬಗೆಹರಿಸಿ.. ಸಿಎಂಗೆ ಪತ್ರ ಬರೆದ ಅನಗೋಡು ಗ್ರಾಮಸ್ಥರು..

ABOUT THE AUTHOR

...view details