ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿ ವೈದ್ಯರು ಸೇರಿದಂತೆ 44 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇಂದು ಒಂದೇ ದಿನ 17 ಜನ ಸೋಂಕಿತರು ಗುಣಮುಖರಾಗಿದ್ದಾರೆ.
ಇಂದು ಕೊರೊನಾ ದೃಢಪಟ್ಟ 8 ಮಂದಿ ವೈದ್ಯರಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರು ಸೇರಿದ್ದಾರೆ. 44 ಮಂದಿಯಲ್ಲಿ 2 ಸೌದಿ ಅರೇಬಿಯಾದಿಂದ, 1 ಹೊರ ರಾಜ್ಯ, 3 ಅಂತರ್ ಜಿಲ್ಲೆಯಿಂದ ಆಗಮಿಸಿದವರಾಗಿದ್ದಾರೆ. 9 ಐಎಲ್ಐ, 3 ತೀವ್ರ ಉಸಿರಾಟದ ಪ್ರಕರಣ, 21 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದಾರೆ. ಇನ್ನುಳಿದ 5 ಮಂದಿಯ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. 44 ಮಂದಿ ಸೋಂಕಿತರಲ್ಲಿ 33 ಪುರುಷರು 11 ಮಂದಿ ಮಹಿಳೆಯರಾಗಿದ್ದಾರೆ.