ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 414 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಅತೀ ಹೆಚ್ಚಿನ ಪ್ರಕರಣವಾಗಿದೆ.
ಮಂಗಳೂರು ತಾಲೂಕಿನಲ್ಲಿ 222, ಬಂಟ್ವಾಳ ತಾಲೂಕಿನಲ್ಲಿ 64, ಪುತ್ತೂರು ತಾಲೂಕಿನಲ್ಲಿ 49, ಸುಳ್ಯ ತಾಲೂಕಿನಲ್ಲಿ 31, ಬೆಳ್ತಂಗಡಿ ತಾಲೂಕಿನಲ್ಲಿ 28 ಪ್ರಕರಣ ದಾಖಲಾಗಿದ್ದರೆ ಹೊರಜಿಲ್ಲೆಯ 20 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ13,479ಕ್ಕೆ ಏರಿಕೆಯಾಗಿದೆ.