ಕರ್ನಾಟಕ

karnataka

ETV Bharat / state

ಪಾದರಕ್ಷೆ- ಬಾಯಿಯೊಳಗೆ ಚಿನ್ನ ಬಚ್ಚಿಟ್ಟು ಸಾಗಾಟ: ಮಂಗಳೂರು ಏರ್​ಪೋರ್ಟ್​​ನಲ್ಲಿ ಇಬ್ಬರ ಬಂಧನ - ಮಂಗಳೂರು ಸುದ್ದಿ

ಪಾದರಕ್ಷೆ ಮತ್ತು ಬಾಯಿಯೊಳಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

Mangaluru airport
ಪಾದರಕ್ಷೆ-ಬಾಯಿಯೊಳಗೆ ಚಿನ್ನವಿಟ್ಟು ಅಕ್ರಮ ಸಾಗಾಟ

By

Published : Mar 29, 2021, 10:40 AM IST

ಮಂಗಳೂರು:ಪಾದರಕ್ಷೆ ಮತ್ತು ಬಾಯಿಯೊಳಗೆ 18.75 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಸುಕುರ್ ಮೊಯ್ದಿನ್ ಕುಂಞಿ (48) ಮತ್ತು ಭಟ್ಕಳದ ಮಿಶ್ರಿ ನಸೀಮುಲ್ಲ ಗನಿ (44) ಬಂಧಿತರು.

ಇವರಲ್ಲಿ ಮೊಯ್ದಿನ್ ಕುಂಞಿ ಸ್ಪೈಸ್​ ಜೆಟ್ ವಿಮಾನದಲ್ಲಿ ಮತ್ತು ಮಿಶ್ರಿ ನಸೀಮುಲ್ಲ ಗನಿ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಆಗಮಿಸಿದ್ದರು. ಇವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಇವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಒಬ್ಬರು ಚಿನ್ನವನ್ನು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾದ ಪಾದರಕ್ಷೆಯಲ್ಲಿ, ಮತ್ತೊಬ್ಬರು ಬಾಯಿಯಲ್ಲಿ‌ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದರು. ಇವರಿಂದ 405 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ 18.75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು ಆರೋಪಿ ಪ್ರಯಾಣಿಕರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details