ಬಂಟ್ವಾಳ(ದಕ್ಷಿಣ ಕನ್ನಡ): ಪಂಜಿಕಲ್ಲಿನ ಮುಕುಡ ಎಂಬಲ್ಲಿ ಜುಲೈ 6ರಂದು ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದರು. ಇದೀಗ ಮತ್ತೆ ಇಂದು (ಭಾನುವಾರ) ಸಂಜೆ ಭೂಕುಸಿತ ಉಂಟಾಗಿದೆ. ಅಧಿಕಾರಿಗಳ ಸಮಯಪ್ರಜ್ಞೆಯಿಂದ, ಸ್ಥಳದಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಸಂಜೆ ಘಟನಾ ಸ್ಥಳಕ್ಕೆ ಸೂಚನೆ ಹೊರತಾಗಿಯೂ ಸಾರ್ವಜನಿಕರು ಬರುತ್ತಿದ್ದರೂ ತಾಲೂಕು ಆಡಳಿತ ಮತ್ತು ಸ್ಥಳೀಯ ಆಡಳಿತದ ಎಚ್ಚರಿಕೆಯ ಹೊರತಾಗಿಯೂ ಘಟನಾ ಸ್ಥಳ ವೀಕ್ಷಣೆಗೆ ಜನರು ಹೋಗುತ್ತಿರುವ ವಿಷಯ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾರಾಮು, ಆರಕ್ಷಕ ಇಲಾಖೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ತುರ್ತು ಸೇವಾ ತಂಡ ದೊಡ್ಡ ಅನಾಹುತವೊಂದನ್ನು ತಪ್ಪಿಸಿದೆ.