ಮಂಗಳೂರು:ಬೆಂದೂರಿನ ಚರ್ಚ್ ಕಛೇರಿಗೆ ನುಗ್ಗಿದ ಕಳ್ಳನೋರ್ವ ಲಕ್ಷಾಂತರ ರೂ. ಹಣ ದೋಚಿ ಪರಾರಿಯಾಗಿದ್ದಾನೆ.
ಬೆಂದೂರು ಚರ್ಚ್ ಕಛೇರಿಗೆ ನುಗ್ಗಿದ ಕಳ್ಳ: 4 ಲಕ್ಷ ರೂ. ನಗದು ದೋಚಿ ಪರಾರಿ - 4.98 lakh Rs theft
ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ನ ಫಾದರ್ ಬೆಳಿಗ್ಗೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆಗೆ ತೆರಳಿದ್ದರು. ಬೆಳಗ್ಗಿನ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು. ಈ ವೇಳೆ ಕಚೇರಿಗೆ ನುಗ್ಗಿದ ಕಳ್ಳ 4.98 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದಾನೆ ಎನ್ನಲಾಗ್ತಿದೆ.
ಬೆಂದೂರು ಚರ್ಚ್
ಏಪ್ರಿಲ್ 5 ರಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ನ ಫಾದರ್ ಬೆಳಿಗ್ಗೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆಗೆ ತೆರಳಿದ್ದರು. ಬೆಳಗ್ಗಿನ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು. ಈ ವೇಳೆ ಕಚೇರಿಗೆ ನುಗ್ಗಿದ ಕಳ್ಳ 4.98 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾನೆ.
ಫಾದರ್ ಅವರು ಪ್ರಾರ್ಥನೆ ಮುಗಿಸಿ ಮತ್ತೆ ಕಚೇರಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.