ಕರ್ನಾಟಕ

karnataka

ETV Bharat / state

4.15 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆ ಅನುಷ್ಠಾನ: ಸಂಜೀವ ಮಠಂದೂರು - ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆ ಅನುಷ್ಠಾನ

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಹಿತದೃಷ್ಟಿಯಿಂದ ಪುತ್ತೂರು ನಗರ ಸಭೆ ಹಾಗು ರೋಟರಿ ಕ್ಲಬ್ ಪೂರ್ವ ಇದರ ಸಹಭಾಗಿತ್ವದಲ್ಲಿ ಬನ್ನೂರು ನೆಕ್ಕಿಲದಲ್ಲಿ ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆಗೆ ಕೌನ್ಸಿಲ್ ಸಭೆಯ ಮಂಜೂರಾತಿ ಪಡೆಯಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Puttur
4.15 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆ ಅನುಷ್ಠಾನ

By

Published : May 14, 2021, 7:41 AM IST

ಪುತ್ತೂರು (ದಕ್ಷಿಣಕನ್ನಡ): ತಾಲೂಕಿನ ಬನ್ನೂರು ಡಂಪಿಂಗ್ ಯಾರ್ಡ್​ನಲ್ಲಿ 4.15 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆ ಅನುಷ್ಠಾನ ಮಾಡಲಾಗವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

4.15 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆ ಅನುಷ್ಠಾನ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಹಿತದೃಷ್ಟಿಯಿಂದ ಪುತ್ತೂರು ನಗರ ಸಭೆ ಹಾಗು ರೋಟರಿ ಕ್ಲಬ್ ಪೂರ್ವ ಇದರ ಸಹಭಾಗಿತ್ವದಲ್ಲಿ ಬನ್ನೂರು ನೆಕ್ಕಿಲದಲ್ಲಿ ಸಮಗ್ರ ಘನ ತ್ಯಾಜ್ಯ ವಿಲೇವಾರಿ ಯೋಜನೆಗೆ ಕೌನ್ಸಿಲ್ ಸಭೆಯ ಮಂಜೂರಾತಿ ಪಡೆಯಲಾಗಿದೆ. ಜೊತೆಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದೆ.

ಹಸಿ, ಒಣ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸುವ ಸಮಗ್ರ ಯೋಜನೆ ಇದಾಗಿದೆ. ಈ ಯೋಜನೆ ಕಾಲಾವಧಿ 15 ವರ್ಷಗಳಾಗಿದ್ದು, ಈಗಾಗಲೇ ಪುತ್ತೂರು ನಗರ ಸಭೆ ಹಾಗು ರೋಟರಿ ಕ್ಲಬ್ ಪೂರ್ವ ಸಂಸ್ಥೆಯ ಮಧ್ಯೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ. ಮುಂದಿನ 18 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಪ್ರತಿ ದಿನ 20 ಟನ್ ಹಸಿ ತ್ಯಾಜ್ಯವನ್ನು ಜೈವಿಕ ಅನಿಲವಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಪುತ್ತೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಪುತ್ತೂರು 60,000 ಜನಸಂಖ್ಯೆ ಹಾಗು 32.23 ಚದರ ಕಿ.ಮಿ ವಿಸ್ತೀರ್ಣದಲ್ಲಿ ಒಟ್ಟು 31 ವಾರ್ಡ್​ಗಳನ್ನು ಹೊಂದಿದೆ. ನಗರಸಭೆಯಲ್ಲಿ ಪ್ರಸ್ತುತ 54 ಪೌರಕಾರ್ಮಿಕರಿದ್ದು, 14 ವಾಹನಗಳನ್ನು ಬಳಸಿಕೊಂಡು ನಗರದಾದ್ಯಂತ ಮನೆ-ಮನೆ ಕಸ ಸಂಗ್ರಹಣೆ ಮತ್ತು ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ:92 ವರ್ಷದ ಕೈದಿಯನ್ನ ಸರಪಳಿಯಿಂದ ಕಟ್ಟಿಹಾಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ABOUT THE AUTHOR

...view details