ಮಂಗಳೂರು (ದ.ಕ):ಜಿಲ್ಲೆಯಲ್ಲಿ ಕೊರೊನಾದಿಂದ ಇಂದು ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರೂ ಕೂಡ ಮಂಗಳೂರು ತಾಲೂಕಿನವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.
ಮಂಗಳೂರಲ್ಲಿ ಮುಂದುವರಿದ ಕೊರೊನಾ...ನಾಲ್ವರು ಸಾವು, 225 ಮಂದಿಗೆ ಸೋಂಕು - Mangalore Corona case
ಮಂಗಳೂರಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಸೋಂಕಿನಿಂದ ಇಂದು ನಾಲ್ವರು ಮೃತಪಟ್ಟರೆ, ಹೊಸದಾಗಿ 225 ಮಂದಿಗೆ ಸೋಂಕು ದೃಢವಾಗಿದೆ.
ಇದಲ್ಲದೆ ಜಿಲ್ಲೆಯಲ್ಲಿಂದು 225 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ 147 ಮಂದಿ ಮಂಗಳೂರು ತಾಲೂಕಿನವರಾಗಿದ್ದು ಒಬ್ಬರು ಮೂಡಬಿದ್ರೆ ತಾಲೂಕು, ಬಂಟ್ವಾಳದ 19 ಮಂದಿ, ಬೆಳ್ತಂಗಡಿಯ 29 ಮಂದಿ, ಪುತ್ತೂರಿನ 16, ಸುಳ್ಯದ 4 ಮತ್ತು 9 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ.
225 ಮಂದಿಯಲ್ಲಿ ಐಎಲ್ಐ ಪ್ರಕರಣದ 67, ಸಾರಿ ಪ್ರಕರಣದ 20, ಪ್ರಾಥಮಿಕ ಸಂಪರ್ಕದಿಂದ 60, ವಿದೇಶ ಪ್ರವಾಸದಿಂದ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. 77 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಈವರೆಗೆ 6,618 ಮಂದಿಗೆ ಕೊರೊನಾ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು 73 ಮಂದಿ ಗುಣಮುಖರಾಗಿದ್ದು ಈವರೆಗೆ ಗುಣಮುಖರಾದವರ ಸಂಖ್ಯೆ 2927ಕ್ಕೆ ಏರಿಕೆಯಾಗಿದೆ. 3138 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.