ಮಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 377 ಜನರ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗಿದೆ. 11 ಮಂದಿಯ ಸ್ಯಾಂಪಲ್ ಟೆಸ್ಟ್ಗೆ ಕಳುಹಿಸಲಾಗಿದ್ದು, 9 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ. ಇಲ್ಲಿವರೆಗೆ 106 ಮಂದಿ ಅವರ ಮನೆಗಳಲ್ಲೇ ನಿಗಾದಲ್ಲಿದ್ದಾರೆ. ಈ ಹಿಂದೆ ಕಳುಹಿಸಿದ 8 ಸ್ಯಾಂಪಲ್ ವಾಪಸ್ ಬಂದಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಎಫೆಕ್ಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 377 ಜನರ ಸ್ಕ್ರೀನಿಂಗ್ ಟೆಸ್ಟ್ - 377 people screening test in Dakshina Kannada district today
ದಕ್ಷಿಣ ಕನ್ನಡದಲ್ಲಿ ಇದುವರೆಗೆ 106 ಮಂದಿ ಅವರ ಮನೆಗಳಲ್ಲೇ ನಿಗಾದಲ್ಲಿದ್ದಾರೆ. ಈ ಹಿಂದೆ ಕಳುಹಿಸಿದ 8 ಸ್ಯಾಂಪಲ್ ವಾಪಾಸ್ ಬಂದಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್
ಯಾರೂ ಕೂಡಾ ಗೊಂದಲಕ್ಕೆ ಒಳಗಾಗುವುದು ಬೇಡ. ಸಾಮಾನ್ಯ ಶೀತ ಜ್ವರಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಬೇಕು ಎಂದಿಲ್ಲ. ಆದರೆ ದೂರ ಪ್ರಯಾಣ ಮಾಡಿದವರು ತಕ್ಷಣ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದು ಒಳಿತು. ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನ ಮನೆಯಲ್ಲೇ ವಿಶೇಷ ನಿಗಾದಲ್ಲಿರುವುದು ಒಳಿತು ಎಂದು ತಿಳಿಸಿದ್ದಾರೆ. ಹಾಸ್ಟೆಲ್ಗಳಿಂದ ಕೋವಿಡ್ ಫ್ರೀ ಸರ್ಟಿಫಿಕೇಟ್ ಕೇಳುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಆದರೆ ಯಾರಿಗೂ ಈ ರೀತಿಯಲ್ಲಿ ಸರ್ಟಿಫಿಕೇಟ್ ತನ್ನಿ ಎಂದು ಹೇಳುವಂತಿಲ್ಲ. ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಎಂದು ತಿಳಿಸಿದ್ದಾರೆ.