ಮಂಗಳೂರು (ದ.ಕ): ಜಿಲ್ಲೆಯಲ್ಲಿಂದು 376 ಮಂದಿಗೆ ಕೊರೊನಾ ದೃಢವಾಗಿದ್ದು, ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 596ಕ್ಕೆ ಏರಿಕೆಯಾಗಿದೆ.
ಮಂಗಳೂರು: ಜಿಲ್ಲೆಯಲ್ಲಿಂದು 376 ಮಂದಿಗೆ ಕೊರೊನಾ... ಇಬ್ಬರು ಬಲಿ - Corona Latest News
ಜಿಲ್ಲೆಯಲ್ಲಿಂದು 376 ಮಂದಿಗೆ ಕೊರೊನಾ ದೃಢವಾಗಿ ಇಬ್ಬರು ಸಾವನಪ್ಪಿದ್ದರೆ, 268 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮಂಗಳೂರು: ಜಿಲ್ಲೆಯಲ್ಲಿಂದು 376 ಮಂದಿಗೆ ಕೊರೊನಾ
ಜಿಲ್ಲೆಯಲ್ಲಿ ಈವರೆಗೆ 25,948 ಮಂದಿಗೆ ಕೊರೊನಾ ದೃಢವಾದಂತಾಗಿದೆ. ಇದಲ್ಲದೆ ಇಂದು 268 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಈವರೆಗೆ 20,854 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4,498 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 1,88,689 ಮಂದಿಯ ತಪಾಸಣೆ ನಡೆಸಲಾಗಿದ್ದು ಇದರಲ್ಲಿ 1,62,741 ನೆಗೆಟಿವ್ ಬಂದಿದೆ.
ಇದರ ನಡುವೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದ 5,963 ಮಂದಿಗೆ ದಂಡ ವಿಧಿಸಲಾಗಿದ್ದು, 7,45,335 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.