ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 7 ಮಂದಿ ಸಾವು, 352 ಪಾಸಿಟಿವ್! - dakshina kannad

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 7 ಸೋಂಕಿತರು ಮೃತಪಟ್ಟಿದ್ದು, 352 ಜನರಿಗೆ ಕೊರೊನಾ ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಹೇಳಿದೆ.

352 positive cases in mangalore
ಕೊರೊನಾದಿಂದ ಇಂದು 7 ಮಂದಿ ಸಾವು,352 ಪಾಸಿಟಿವ್

By

Published : Sep 2, 2020, 1:47 AM IST

Updated : Sep 2, 2020, 2:45 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 7 ಸೋಂಕಿತರು ಸಾವನ್ನಪ್ಪಿದ್ದು, 352 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.

ಮೃತಪಟ್ಟವರಲ್ಲಿ 4 ಜನರು ಮಂಗಳೂರು ತಾಲೂಕು, ಇಬ್ಬರು ಪುತ್ತೂರು ತಾಲೂಕು ಮತ್ತು ಒಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ ಸಾವನಪ್ಪಿದವರ ಸಂಖ್ಯೆ 375ಕ್ಕೆ ಏರಿದೆ.

ಕೊರೊನಾದಿಂದ ಇಂದು 7 ಮಂದಿ ಸಾವು,352 ಪಾಸಿಟಿವ್

ಸೋಂಕು ದೃಢಪಟ್ಟ 165 ಜನರು ಮಂಗಳೂರು ತಾಲೂಕು, 87 ಮಂದಿ ಬಂಟ್ವಾಳ ತಾಲೂಕು, 42 ಮಂದಿ ಪುತ್ತೂರು ತಾಲೂಕು, 19 ಮಂದಿ ಸುಳ್ಯ ತಾಲೂಕು, 25 ಮಂದಿ ಬೆಳ್ತಂಗಡಿ ತಾಲೂಕು ಮತ್ತು 14 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 13,065 ಮಂದಿಗೆ ಕೊರೊನಾ ‌ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು 363 ಮಂದಿ ಗುಣಮುಖರಾಗಿದ್ದು, ಈವರೆಗೆ 10152 ಮಂದಿ ಗುಣಮುಖರಾಗಿದ್ದಾರೆ. 2538 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : Sep 2, 2020, 2:45 AM IST

ABOUT THE AUTHOR

...view details