ಮಂಗಳೂರು: ಹಜ್ ಸಮಿತಿಯಿಂದ ಮಂಗಳೂರು ಮೂಲಕ ತೆರಳಿದ ಹಜ್ ಯಾತ್ರಿಕರ ತಂಡ ಮರಳಿ ತಾಯ್ನಾಡಿಗೆ ಬರಲು ಆರಂಭಿಸಿದೆ.
ಹಜ್ ಯಾತ್ರೆ ಮುಗಿಸಿ ತಾಯ್ನಾಡಿಗೆ ವಾಪಸಾದ 305 ಯಾತ್ರಿಕರು - ಯಾತ್ರಿಕರ ತಂಡ ಮರಳಿ ತಾಯ್ನಾಡಿಗೆ
ಹಜ್ ಸಮಿತಿಯಿಂದ ಮಂಗಳೂರು ಮೂಲಕ ತೆರಳಿದ್ದ ಹಜ್ ಯಾತ್ರಿಕರ ತಂಡ ಮರಳಿ ತಾಯ್ನಾಡಿಗೆ ಬರಲು ಆರಂಭಿಸಿದ್ದು, ಒಟ್ಟು 305 ಯಾತ್ರಿಕರು ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೂಲಕ ಮರಳಿ ಬಂದಿದ್ದಾರೆ.
ಒಟ್ಟು 305 ಯಾತ್ರಿಕರು ಮರಳಿ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೂಲಕ ಮರಳಿ ಬಂದಿದ್ದಾರೆ.
ಮೊದಲ ತಂಡ ಶನಿವಾರ ಮಧ್ಯಾಹ್ನ 3.33ಕ್ಕೆ ತಲುಪಿದ್ದು, ಇದರಲ್ಲಿ 157 ಹಜ್ ಯಾತ್ರಿಕರಿದ್ದರು. ಮೊದಲ ತಂಡವನ್ನು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಯೆನೆಪೋಯ ಮುಹಮ್ಮದ್ ಕುಂಞಿ ಸ್ವಾಗತಿಸಿದರು. ನಿರ್ಗಮನ ವಿಭಾಗಕ್ಕೆ ಪ್ರಥಮವಾಗಿ ಆಗಮಿಸಿದ ಹಜ್ ಯಾತ್ರಿಕ ಅಶ್ರಫ್ ಹಾಜಿ ನೆಲ್ಯಾಡಿ ಅವರನ್ನು ಸ್ವಾಗತಿಸಲಾಯಿತು. ದ್ವಿತೀಯ ವಿಮಾನ ಸಂಜೆ 7.59ಕ್ಕೆ ಮಂಗಳೂರು ತಲುಪಿದ್ದು, ಇದರಲ್ಲಿ 148 ಹಜ್ ಯಾತ್ರಿಕರಿದ್ದರು. ಇವರನ್ನು ಮಾಜಿ ಸಚಿವ ಯು.ಟಿ.ಖಾದರ್, ಬಿ.ರಮಾನಾಥ ರೈ ಮೊದಲಾದವರು ಬರಮಾಡಿಕೊಂಡರು.