ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯಲ್ಲಿ ಕೊಂಚ ಬಿಡುವು ಪಡೆದ ಮಳೆ...24 ಗಂಟೆಗಳಲ್ಲಿ 30 ಮಿ.ಮೀ ಸುರಿದ ಮಳೆ - Dakshina Kannada rain news

ಬೆಳ್ತಂಗಡಿಯಲ್ಲಿ‌ 32 ಮಿ.ಮೀ ಮಳೆ ಸುರಿದಿದೆ. ಬಂಟ್ವಾಳದಲ್ಲಿ 29 ಮಿ.ಮೀ ಮಳೆ ಸುರಿದಿದೆ. ಮಂಗಳೂರಿನಲ್ಲಿಯೂ 53 ಮಿ.ಮೀ ಮಳೆ ಸುರಿದಿದ್ದು, ಪುತ್ತೂರಿನಲ್ಲಿ 23, ಸುಳ್ಯದಲ್ಲಿ 22, ಮೂಡುಬಿದಿರೆಯಲ್ಲಿ 37 ಕಡಬದಲ್ಲಿ 21 ಮಿ.ಮೀ ಮಳೆ ಸುರಿದಿದೆ.

DC Dr KV Rajendra
DC Dr KV Rajendra

By

Published : Aug 11, 2020, 7:48 PM IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಇಂದು ಕೊಂಚ ಬಿಡುವು ದೊರೆತಿದೆ. ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ 30 ಮಿ.ಮೀ. ಮಳೆ ಸುರಿದಿದೆ.

ಜಿಲ್ಲೆಯಾದ್ಯಂತ ಇಂದು ಇಡೀ ದಿನ ನಿರಂತರವಾಗಿ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ ಬೆಳ್ತಂಗಡಿಯಲ್ಲಿ‌ 32 ಮಿ.ಮೀ ಮಳೆ ಸುರಿದಿದೆ. ಬಂಟ್ವಾಳದಲ್ಲಿ 29 ಮಿ.ಮೀ ಮಳೆ ಸುರಿದಿದೆ. ಮಂಗಳೂರಿನಲ್ಲಿಯೂ 53 ಮಿ.ಮೀ ಮಳೆ ಸುರಿದಿದ್ದು, ಪುತ್ತೂರಿನಲ್ಲಿ 23, ಸುಳ್ಯದಲ್ಲಿ 22, ಮೂಡುಬಿದಿರೆಯಲ್ಲಿ 37 ಕಡಬದಲ್ಲಿ 21 ಮಿ.ಮೀ ಮಳೆ ಸುರಿದಿದೆ.

ಬಂಟ್ವಾಳದಲ್ಲಿ ಸದ್ಯ ನೇತ್ರಾವತಿ ನದಿಯ ನೀರಿನ ಮಟ್ಟ 5.1 ಮೀಟರ್‌ (ಅಪಾಯದ ಮಟ್ಟ 8.5 ಮೀಟರ್) ಆಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 31.5 ಮೀಟರ್ ಇದ್ದು, ಈಗಿನ ನೀರಿನ ಮಟ್ಟ 26.4 ಮೀಟರ್‌ ಆಗಿದೆ. ಕುಮಾರಧಾರ ನದಿಯ ಅಪಾಯದ ಮಟ್ಟ 26.5 ಮೀಟರ್ ಇದ್ದು, ಈಗಿನ ನೀರಿನ ಮಟ್ಟ 20.0 ಮೀಟರ್‌ ಆಗಿದೆ. ಗುಂಡ್ಯ ನದಿಯ ಅಪಾಯದ ಮಟ್ಟ 5.0 ಮೀಟರ್ ಇದ್ದು, ಈಗಿನ ನೀರಿನ ಮಟ್ಟ 4.1 ಮೀಟರ್‌ ಆಗಿದೆ.

ಏ.1 ರಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ನಾಲ್ಕು‌ ಜೀವಕ್ಕೆ ಹಾನಿಯಾಗಿದೆ. ಇಬ್ಬರಿಗೆ ಗಾಯವಾಗಿದ್ದು, ಮೂರು ಜಾನುವಾರುಗಳು ಮೃತಪಟ್ಟಿದೆ. ಅದೇ ರೀತಿ ಮಳೆಯಿಂದ ತುಂಬಿ ಹರಿಯುತ್ತಿರುವ ನದಿ ಪಾತ್ರಗಳ ಬದಿಯಲ್ಲಿ ವಾಸಿಸುತ್ತಿರುವ 224 ಮಂದಿಯನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಅದಕ್ಕಾಗಿ 6 ಕಾಳಜಿ ಕೇಂದ್ರಗಳನ್ನು ‌ತೆರೆಯಲಾಗಿದೆ.

ಅಲ್ಲದೇ ಜಿಲ್ಲೆಯಾದ್ಯಂತ 34 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 867 ಮನೆಗಳು ಭಾಗಶಃ ಹಾನಿಯಾಗಿದೆ. ಅಪಾಯದಲ್ಲಿರುವವರ ರಕ್ಷಣೆಗಾಗಿ ಈಗಾಗಲೇ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳನ್ನು ನಿಯೋಜನೆಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details