ಮಂಗಳೂರು (ದಕ್ಷಿಣ ಕನ್ನಡ):ರಾಜ್ಯದಲ್ಲಿ ಇದುವರೆಗೂ 512 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 20 ಮಂದಿ ಈ ಮಾರಕ ವೈರಸ್ಗೆ ಬಲಿಯಾಗಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುತ್ತಿರುವುದು ಹಾಗೂ ಕಡಿಮೆ ಪ್ರಕರಣಗಳು ವರದಿಯಾಗುತ್ತಿರುವುದು ಸಮಾಧಾನಕರ ವಿಷಯ ಎನ್ನಬಹುದು.
ದಕ್ಷಿಣ ಕನ್ನಡದ 3 ಗ್ರಾಮಗಳು ಸೀಲ್ಡೌನ್ ಮುಕ್ತ...ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ - ದಕ್ಷಿಣ ಕನ್ನಡದ 3 ಗ್ರಾಮಗಳು ಸೀಲ್ಡೌನ್ ಮುಕ್ತ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲೋನಿ ಹಾಗೂ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮಗಳು ಏಪ್ರಿಲ್ 18 ರಿಂದ ಸೀಲ್ಡೌನ್ಗೆ ಒಳಗಾಗಿದ್ದವು. ಇದೀಗ ಈ ಮೂರೂ ಗ್ರಾಮಗಳು ಸೀಲ್ಡೌನ್ ಮುಕ್ತವಾಗಿವೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ 3 ಗ್ರಾಮಗಳು ಸೀಲ್ಡೌನ್ನಿಂದ ಮುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಮಾಹಿತಿ ನೀಡಿದ್ದಾರೆ. ಈ ಮೂರೂ ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದ ಕಾರಣ ಗ್ರಾಮಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿತ್ತು. ಆದರೆ ಈಗ ಜನರು ನಿಟ್ಟುಸಿರು ಬಿಡುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಾಲೋನಿ ಹಾಗೂ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮಗಳು ಸೀಲ್ಡೌನ್ನಿಂದ ಹೊರ ಬಂದಿವೆ. ಈ ಗ್ರಾಮಗಳಲ್ಲಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ 18 ರಿಂದ ಸೀಲ್ಡೌನ್ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಆದೇಶ ನೀಡಿದ್ದರು. ಕಳೆದ 28 ದಿನಗಳಿಂದ ಈ ಗ್ರಾಮಗಳಲ್ಲಿ ಹೊಸ ಪ್ರಕರಣ ಪತ್ತೆಯಾಗಲಿಲ್ಲ. ಅಲ್ಲದೆ ಆ ಗ್ರಾಮಗಳಲ್ಲಿ ಬಹುತೇಕ ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದು ಅವರಲ್ಲಿ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಈ ಕಾರಣ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರ ಸೂಚನೆ ಮೇರೆಗೆ ಈ ಈ ಮೂರೂ ಗ್ರಾಮಗಳನ್ನು ಸೀಲ್ಡೌನ್ನಿಂದ ಮುಕ್ತ ಮಾಡಲಾಗಿದೆ.