ಬಂಟ್ವಾಳ: ಉತ್ತರಪ್ರದೇಶದಿಂದ ಆಗಮಿಸಿದ ಮೂವರು ಸಲೂನ್ ಶಾಪ್‌ಗೆ ಕೆಲಸಕ್ಕೆ ಹಾಜರಾಗಿರುವವರ ಬಗ್ಗೆ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲ್ವರನ್ನೂ ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದ್ದಾರೆ.
ಯುಪಿಯಿಂದ ಆಗಮಿಸಿದ ಕೆಲಸಗಾರರು.. ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ - ಉತ್ತರ ಪ್ರದೇಶದಿಂದ ಆಗಮಿಸಿದ ಮೂವರು ಸಲೂನ್ ಶಾಪ್ ಕೆಲಸಗಾರರು
ಮೂವರು ಇಂದು ಸಲೂನ್ ಶಾಪ್‌ಗೆ ಕೆಲಸಕ್ಕೆ ಹಾಜರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ, ಸಲೂನ್ ಶಾಪ್‌ಗೆ ಬೀಗ ಹಾಕಿದ್ದಾರೆ..
ಲಾಕ್‌ಡೌನ್ ಸಂದರ್ಭದಲ್ಲಿ ವಿಟ್ಲ ಪಟ್ಟಣದ ಸಲೂನ್, ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ನಿವಾಸಿಗಳು ತಮ್ಮ ಊರಿಗೆ ತೆರಳಿದ್ದರು. ಇದೀಗ ಅಲ್ಲಿಂದ ನಾಲ್ವರು ಮತ್ತೆ ವಿಟ್ಲಕ್ಕೆ ಆಗಮಿಸಿದ್ದಾರೆ. ಅವರಲ್ಲಿ ಮೂವರು ಇಂದು ಸಲೂನ್ ಶಾಪ್‌ಗೆ ಕೆಲಸಕ್ಕೆ ಹಾಜರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ, ಸಲೂನ್ ಶಾಪ್‌ಗೆ ಬೀಗ ಹಾಕಿದ್ದಾರೆ.
ಜೊತೆಗೆ ಹೋಮ್ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದ್ದಾರೆ. ಮೂರು ತಿಂಗಳ ಹಿಂದೆ ತವರಿಗೆ ತೆರಳಿದ ಕೆಲಸಗಾರರು ರೈಲು ವ್ಯವಸ್ಥೆ ಇಲ್ಲದೆ ಹೇಗೆ ಮತ್ತೆ ವಿಟ್ಲಕ್ಕೆ ಮರಳಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.