ಕರ್ನಾಟಕ

karnataka

ETV Bharat / state

ಮಂಗಳೂರು: ಸಿಮ್ ಬದಲಾವಣೆ ಮಾಡಲು ಹೋಗಿ 29 ಸಾವಿರ ಕಳೆದುಕೊಂಡ ವ್ಯಕ್ತಿ

ಸಿಮ್ ಬದಲಾವಣೆ ಮಾಡಲು ಹೋಗಿ ಬಂಟ್ವಾಳ ದ ವ್ಯಕ್ತಿ ಯೊಬ್ಬ 29,951 ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು
ಮಂಗಳೂರು

By

Published : Dec 3, 2021, 5:51 PM IST

ಮಂಗಳೂರು : ಮೊಬೈಲ್ ಸಿಮ್​​​ನಲ್ಲಿ ಸಮಸ್ಯೆಯಾಗಿದೆ ಎಂದು ಸಿಮ್ ಬದಲಾವಣೆ ಮಾಡಲು ಹೋಗಿ ಬಂಟ್ವಾಳದ ವ್ಯಕ್ತಿಯೊಬ್ಬ 29,951 ರೂಪಾಯಿ ಕಳೆದುಕೊಂಡಿದ್ದಾರೆ.

ಬಂಟ್ವಾಳದ ಜಿ ಪ್ರವೀಣ್ ಜೋಶಿ ಹಣ ಕಳೆದುಕೊಂಡವರು. ಸಿಮ್ ಹಾಳಾಗಿದ್ದು, ಅದೇ ಸಂಖ್ಯೆಯ ಬದಲಿ ಸಿಮ್​​​​ಗೆ ಪ್ರಯತ್ನ ಪಡುತ್ತಿದ್ದಾಗ ತಮ್ಮ ಮೊಬೈಲ್​​​​ಗೆ ಬಂದ ಸಂದೇಶವೊಂದನ್ನು ಗಮನಿಸಿದ್ದಾರೆ. ಮೊದಲ ದಿನ SLM DOCCUM PENDING SIM DEACTIVATE ಎಂಬ ಮೆಸೇಜ್ ಬಂದಿದ್ದು, ಮರುದಿನ ಕೂಡ ಇದೇ ಮೆಸೇಜ್ ಬಂದಿತ್ತು.

ತನ್ನ ಸಿಮ್ ಕಾರ್ಯನಿರ್ವಹಿಸದಿರಲು ಇದು ಕಾರಣ ಎಂದು ತಿಳಿದುಕೊಂಡ ಅವರು ಅಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ವೇಳೆ ಸಿಮ್ ಸರಿಪಡಿಸಿಕೊಡುವುದಾಗಿ ತಿಳಿಸಿದ ಅನಾಮಿಕ ವ್ಯಕ್ತಿ ಅವರ ಮೊಬೈಲ್ ನಲ್ಲಿ ANY DESK APP ಇನ್​ಸ್ಟಾಲ್ ಮಾಡಲು ತಿಳಿಸಿದ್ದಾರೆ. ಅದರಂತೆ ಇವರು ಆ್ಯಪ್ ಇನ್​ಸ್ಟಾಲ್ ಮಾಡಿದ್ದಾರೆ.

ಬಳಿಕ ಆ ವ್ಯಕ್ತಿ ಸಿಮ್ ಬದಲಾವಣೆ ಶುಲ್ಕ ರೂ 10 ಅನ್ನು RECHARGECUBE ನಲ್ಲಿ ಡೆಬಿಟ್ ಕಾರ್ಡ್ ಮೂಲಕ ಪಾವತಿಸುವಂತೆ ತಿಳಿಸಿದ್ದು, ಅದರಂತೆ ಇವರು ಪಾವತಿಸಿದ್ದಾರೆ‌. ಆದರೆ, ಹಣ ಸ್ವೀಕಾರವಾಗಿಲ್ಲ ಎಂದು ಹೇಳಿದ ವ್ಯಕ್ತಿ ಮತ್ತೊಂದು ಡೆಬಿಟ್ ಕಾರ್ಡ್ ನಿಂದ ಪಾವತಿಸಲು ಹೇಳಿದ್ದಾರೆ.

ಆದರೆ, ಅದನ್ನು ಇವರು ನಿರಾಕರಿಸಿದ್ದಾರೆ. ಸ್ವಲ್ಪ ಸಮಯದಲ್ಲಿ OTP ಮೊಬೈಲ್​​ಗೆ ಬಂದಿದ್ದು, ಸಂಶಯಗೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ 29,951 ರೂಪಾಯಿ ಇವರ ಖಾತೆಯಿಂದ ಕಡಿತಗೊಂಡಿರುವುದು ತಿಳಿದುಬಂದಿದೆ. Any desk app ಬಳಸಿ ಸಿಮ್ ಸರಿಪಡಿಸುವುದಾಗಿ ಈ ವ್ಯಕ್ತಿಗೆ ವಂಚಕರು 29,951 ರೂಪಾಯಿ ವಂಚಿಸಿದ್ದು, ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details