ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು 7 ಮಂದಿ ಸಾವನ್ನಪ್ಪಿದ್ದು, 272 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ದ.ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 7 ಮಂದಿ ಬಲಿ, 272 ಸೋಂಕಿತರು ಪತ್ತೆ - ದಕ್ಷಿಣ ಕನ್ನಡ ಕೊರೊನಾ ಪ್ರಕರಣಗಳು
ಜಿಲ್ಲೆಯಲ್ಲಿಂದು 272 ಜನರಿಗೆ ಸೋಂಕು ತಗುಲಿದ್ದು 7 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 12,109ಕ್ಕೆ ಏರಿಕೆಯಾಗಿದೆ.
ಕೊರೊನಾದಿಂದ ಸಾವನ್ನಪ್ಪಿದ 7 ಮಂದಿಯಲ್ಲಿ ಓರ್ವರು ಮಂಗಳೂರು ತಾಲೂಕು, 4 ಮಂದಿ ಪುತ್ತೂರು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 272 ಮಂದಿಗೆ ಕೊರೊನಾ ದೃಢಪಟ್ಟಿದ್ದು, 163 ಮಂದಿ ಮಂಗಳೂರು, 30 ಮಂದಿ ಬಂಟ್ವಾಳ, 33 ಮಂದಿ ಪುತ್ತೂರು, 23 ಮಂದಿ ಸುಳ್ಯ, 11 ಮಂದಿ ಬೆಳ್ತಂಗಡಿ ಮತ್ತು 12 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಸೋಂಕಿತರ ಸಂಖ್ಯೆ 12,109ಕ್ಕೆ ಏರಿಕೆಯಾಗಿದ್ದು, ಈ ಪೈಕಿ 9,209 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2,550 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.