ಮಂಗಳೂರು :ಇಲ್ಲಿನ ನಿವಾಸಿಯೊಬ್ಬರಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ರೂ 25.49 ಲಕ್ಷ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ. ಮಂಗಳೂರಿನ ವ್ಯಕ್ತಿಯೊಬ್ಬರು ನೌಕರಿಯ ಬಗ್ಗೆ ವೈಯಕ್ತಿಕ ವಿವರಗಳನ್ನು ವೆಬ್ಸೈಟ್ನಲ್ಲಿ ಹಾಕಿದ್ದಾರೆ.
2021ರ ಏಪ್ರಿಲ್ 6ರಂದು ಅಂಕುರ್ ದೇಸಾಯಿ ಎಂಬಾತ ಫೋನ್ ಮಾಡಿ securecareer.comನಲ್ಲಿ ವೈಯಕ್ತಿಕ ವಿವರ ನೋಂದಾಯಿಸುವಂತೆ ತಿಳಿಸಿದ್ದಾನೆ. ಅದರಂತೆ ರೂ. 2,358 ಪಾವತಿಸಿದ ಬಳಿಕ ಆ ಸಂಸ್ಥೆಯವರು ಖಾಲಿ ಇರುವ ವಿವಿಧ ಉದ್ಯೋಗಗಳ ಮಾಹಿತಿ ನೀಡಿದ್ದಾರೆ.
ಓದಿ:ಹಿಮಪಾತದ ಮಧ್ಯೆ ಜೋಡಿಯನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ದು ವಿವಾಹ ಕಾರ್ಯ- ವಿಡಿಯೋ ನೋಡಿ
ಆ ಬಳಿಕ ಸಂಸ್ಕರಣಾ ಶುಲ್ಕವೆಂದು ರೂ. 4,130, ರೂ. 10,65,065 ಹಾಗೂ ರೂ. 14,84,014 ಹಂತಹಂತವಾಗಿ ಪಾವತಿ ಮಾಡಿಸಿಕೊಂಡಿದ್ದಾರೆ. ಹೀಗೆ ಒಟ್ಟು ರೂ. 25,49,079 ಹಣವನ್ನು ಉದ್ಯೋಗ ನೀಡುವ ಆಮಿಷವೊಡ್ಡಿ ವಂಚನೆ ಮಾಡಲಾಗಿದೆ ಎಂದು ಮೋಸಗೊಳಗಾದ ವ್ಯಕ್ತಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್ ಪೊಲೀಸರು ಆರೋಪಿಯ ಹಿಂದೆ ಬಿದ್ದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ