ಮಂಗಳೂರು:ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 100 ದಿನಗಳಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೆತ್ತಿಕೊಂಡಿದೆ. 19ನೇ ಶತಮಾನ ಇಂಗ್ಲೆಂಡ್ನವರದಾಗಿತ್ತು, 20ನೇ ಶತಮಾನ ಅಮೆರಿಕಾದವರದಾಗಿತ್ತು, 21ನೇ ಶತಮಾನ ಮೋದಿಯವರ ನೇತೃತ್ವದಲ್ಲಿ ಭಾರತದ ಶತಮಾನ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ 370 ವಿಧಿ, ತ್ರಿವಳಿ ತಲಾಖ್ ರದ್ದು ಸೇರಿ ಏನೇ ಮಾಡಿದರೂ ವಿರೋಧ ಮಾಡುವಂತದ್ದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಚಾಳಿ ಆಗಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಕಾಶ್ಮೀರದಲ್ಲಿ ಆರು ಪೊಲೀಸ್ ಸ್ಟೇಷನ್ ಬಿಟ್ಟರೆ ಮತ್ಯಾವುದೇ ಪೊಲೀಸ್ ಸ್ಟೇಷನ್ಗಳಲ್ಲಿ ಯಾವುದೇ ರೀತಿಯಾದಂತಹ 144 ಸೆಕ್ಷನ್ ಆಗಲಿ, ಕರ್ಫ್ಯೂ ಆಗಲಿ ಇಲ್ಲ. ಯಾರು ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೋ ಅವರನ್ನು ಭದ್ರತಾ ಪಡೆ ಹಿಡಿದು ಪಾಠ ಕಲಿಸುತ್ತಿದೆ. ಈ ಹಿಂದೆ 2008, 2009, 2011ರಲ್ಲಿ 365 ದಿನಗಳಲ್ಲಿ 200, 210,190,180 ದಿವಸಗಳ ಕಾಲ ಅಲ್ಲಿ ಕರ್ಫ್ಯೂ ಹಾಕಲಾಗಿತ್ತು. ಇವತ್ತು ಅಂತಹ ಪರಿಸ್ಥಿತಿ ಇಲ್ಲ ಎಂದರು.