ಕರ್ನಾಟಕ

karnataka

ETV Bharat / state

ಬಂಟ್ವಾಳ ಪುರಸಭೆಗಿಲ್ಲ ಅಧ್ಯಕ್ಷ, ಉಪಾಧ್ಯಕ್ಷರು: ಎರಡು ವರ್ಷಗಳ ಅಜ್ಞಾತವಾಸಕ್ಕೆ ದೊರಕುವುದೇ ಮುಕ್ತಿ? - bantwala mangalore latest news

ಕಳೆದ ವಾರ ಪೌರಾಡಳಿತ ಸಚಿವ ಡಾ. ನಾರಾಯಣಗೌಡ ಪುರಸಭಾ ವ್ಯಾಪ್ತಿಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತು ಮಾತನಾಡಿದ್ದು, ಬಳಿಕ ರಾಜಕೀಯ ಚಟುವಟಿಕೆಗಳು ಒಳಗೊಳಗೆ ನಡೆಯುತ್ತಿವೆ. ಈಗ ಪುರಸಭೆಗೆ ಸಹಾಯಕ ಕಮಿಷನರ್ ಆಡಳಿತಾಧಿಕಾರಿ ಅವರ ಮಾರ್ಗದರ್ಶನದಂತೆ ಪುರಸಭೆ ಮುಖ್ಯಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ.

2018 Bantwal Municipal Election: no one elected yet !
2018ರ ಬಂಟ್ವಾಳ ಪುರಸಭೆ ಚುನಾವಣೆ: ಎರಡು ವರ್ಷಗಳ ಅಜ್ಞಾತವಾಸಕ್ಕೆ ದೊರಕುವುದೇ ಮುಕ್ತಿ?

By

Published : Sep 3, 2020, 10:47 AM IST

ಬಂಟ್ವಾಳ: ಚುನಾಣೆ ನಡೆಯಿತಾದ್ರೂ ಯಾರಿಗೂ ಪೂರ್ಣ ಬಹುಮತವಿಲ್ಲ. ಇದು 2018 ಆಗಸ್ಟ್ 31ರಂದು ನಡೆದ ಬಂಟ್ವಾಳ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಸೆ.3ರಂದು ನಡೆದ ಕೌಂಟಿಂಗ್​ನ ಫಲಿತಾಂಶ. 2 ವರ್ಷಗಳಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಿಲ್ಲ.

ಅಧಿಕಾರ ಯಾರಿಗೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದಂತೆ ಮೀಸಲಾತಿ ಪಟ್ಟಿ ದಿಢೀರನೇ ಬದಲಾಯಿತು, ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಲಾಯಿತು. ಬಳಿಕ ರಾಜ್ಯದಲ್ಲಿ ಸರ್ಕಾರ ಬದಲಾದರೂ, ಬಂಟ್ವಾಳ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾತ್ರ ಆಗಲಿಲ್ಲ. ಜನರಿಂದ ಚುನಾಯಿತರಾದವರು ಹೆಸರಿಗಷ್ಟೇ ಚುನಾಯಿತರೇ ಹೊರತು ಅಧಿಕಾರ ಚಲಾಯಿಸಲು ಅವಕಾಶ ದೊರೆಯಲಿಲ್ಲ.

2018ರ ಬಂಟ್ವಾಳ ಪುರಸಭೆ ಚುನಾವಣೆ: ಎರಡು ವರ್ಷಗಳ ಅಜ್ಞಾತವಾಸಕ್ಕೆ ದೊರಕುವುದೇ ಮುಕ್ತಿ?

ಅಂದು ಬಂಟ್ವಾಳದಲ್ಲಂತೂ ಚುನಾವಣೆ ಅತಂತ್ರ ಸ್ಥಿತಿಯನ್ನೇ ನಿರ್ಮಾಣ ಮಾಡಿತ್ತು. ಪುರಸಭೆಯ 27 ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 12, ಎಸ್​​ಡಿಪಿಐ 4 ಸ್ಥಾನ ಗಳಿಸಿತ್ತು. ಶಾಸಕ, ಸಂಸದರ ಮತಬಲದಿಂದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಾದರೆ, ಬಿಜೆಪಿಗೆ 13 ಮತ ಪಡೆಯುವ ಅವಕಾಶ ಇದೆ. ಆಗ ಬಿಜೆಪಿ 13, ಕಾಂಗ್ರೆಸ್ 12, ಎಸ್​ಡಿಪಿಐ 4 ಆಗುತ್ತದೆ. ಇಲ್ಲಿ ಎಸ್​ಡಿಪಿಐ ಹಿಂದುಳಿಯಲಿದೆ.

ಕಳೆದ ವಾರ ಪೌರಾಡಳಿತ ಸಚಿವ ಡಾ. ನಾರಾಯಣ ಗೌಡ ಅವರು ಪುರಸಭಾ ವ್ಯಾಪ್ತಿಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತು ಸಕಾರಾತ್ಮಕವಾಗಿ ಆಗಿ ಮಾತನಾಡಿದ್ದು, ಬಳಿಕ ರಾಜಕೀಯ ಚಟುವಟಿಕೆಗಳು ಒಳಗೊಳಗೆ ನಡೆಯುತ್ತಿವೆ. ಈಗ ಪುರಸಭೆಗೆ ಸಹಾಯಕ ಕಮಿಷನರ್ ಆಡಳಿತಾಧಿಕಾರಿ ಅವರ ಮಾರ್ಗದರ್ಶನದಂತೆ ಪುರಸಭೆ ಮುಖ್ಯಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ.

ABOUT THE AUTHOR

...view details