ಮಂಗಳೂರು: ದ.ಕ.ಜಿಲ್ಲೆಯಲ್ಲಿ ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣನ್ ಹೇಳಿದರು.
ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಮರಳು ಮಾಫಿಯಾ ನಡೆಯುತ್ತಿದ್ದು, ನಾವು 2 ಸಾವಿರ ರೂ.ಗೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕೆ ನಳಿನ್ ಕುಮಾರ್ ಪರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ ನಿಲ್ಲಬೇಕೆಂಬ ಸದುದ್ದೇಶದಿಂದ ಅವರು ಯುನಿಟ್ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ಅವರು ಹೇಳಿದರು.
ಸಂಸದ ನಳಿನ್ ಕುಮಾರ್ ಅವರ ಮಾತಿಗೆ ನಿನ್ನೆ ಮಾಜಿ ಸಚಿವ ರಮಾನಾಥ ರೈಯವರು ಸುದ್ದಿಗೋಷ್ಠಿಯೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಈ ಮೂಲಕ ಸ್ಪಷ್ಟನೆ ನೀಡಿದ್ದೇವೆ. ಆದರೆ ಸುದ್ದಿಗೋಷ್ಠಿಯಲ್ಲಿ ರಮಾನಾಥ ರೈಯವರೊಂದಿಗೆ ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡವರೇ ಇದ್ದರು. ರಮಾನಾಥ ರೈಯರ ಅಂದು ಹೇಳಿದನ್ನು ಕಂಡಾಗ ಬಹುಶಃ ಅವರ ಕಾಲದಲ್ಲಿದ್ದಂತೆ ಮರಳಿಗೆ 15-20 ಸಾವಿರ ರೂ. ಇರಲಿ ಎಂದು ಅಪೇಕ್ಷೆ ಎಂದೆನಿಸುತ್ತದೆ ಎಂದು ತಿರುಗೇಟು ನೀಡಿದರು.