ಕರ್ನಾಟಕ

karnataka

ETV Bharat / state

ದ‌ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತಿಬ್ಬರು ಬಲಿ - corona death case in mangaluru

ದಕ್ಷಿಣ ಕನ್ನಡದಲ್ಲಿ ಕೊರೊನಾ ಸೋಂಕಿನಿಂದ ಮತ್ತಿಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 16 ತಲುಪಿದೆ.

2 more death due to corona in dakshina kannada
ದ‌.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಮತ್ತಿಬ್ಬರು ಬಲಿ

By

Published : Jul 1, 2020, 10:44 AM IST

Updated : Jul 1, 2020, 10:50 AM IST

ಮಂಗಳೂರು: ಕೋವಿಡ್ ಸೋಂಕು ದ.ಕ. ಜಿಲ್ಲೆಯಲ್ಲಿ ಮತ್ತೆರಡು ಜೀವಗಳನ್ನು ಬಲಿ ಪಡೆದಿದೆ. 72 ವರ್ಷದ ಮಂಗಳೂರಿನ ಬೆಂಗ್ರೆ ನಿವಾಸಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಭಟ್ಕಳ ಮೂಲದ 31 ವರ್ಷದ ಯುವಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಕರಣ -1:

ತೀವ್ರ ಅಸ್ವಸ್ಥರಾಗಿದ್ದ ಬೆಂಗ್ರೆಯ ನಿವಾಸಿಯನ್ನು ನಿನ್ನೆ ರಾತ್ರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹ ಹಾಗೂ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ ಇವರು 8ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದು, 8.30 ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಗಂಟಲು ದ್ರವದ ವರದಿ ಲಭ್ಯವಾಗಿದ್ದು, ಇವರಲ್ಲಿ ಸೋಂಕು ದೃಢಗೊಂಡಿದೆ.

ಪ್ರಕರಣ -2:

ಅಧಿಕ ರಕ್ತದೊಡದಿಂದ ಬಳಲುತ್ತಿದ್ದ ಭಟ್ಕಳ ಮೂಲದ 31 ವರ್ಷದ ಯುವಕನನ್ನು ನಗರದ ಖಾಸಗಿ ಆಸ್ಪತ್ರೆಗೆ ನಿನ್ನೆ ದಾಖಲಿಸಲಾಗಿತ್ತು. ಆದರೆ ತೀವ್ರ ಅಸ್ವಸ್ಥರಾಗಿದ್ದ ಇವರು ಆಸ್ಪತ್ರೆಗೆ ಆಗಮಿಸಿರುವ ಕೇವಲ 5 ನಿಮಿಷಗಳಲ್ಲೇ ಮೃತಪಟ್ಟಿದ್ದಾರೆ. ಇವರ ಗಂಟಲು ದ್ರವದ ವರದಿ ಲಭ್ಯವಾಗಿದ್ದು, ಇವರಲ್ಲಿ ಸೋಂಕು ದೃಢಗೊಂಡಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Last Updated : Jul 1, 2020, 10:50 AM IST

ABOUT THE AUTHOR

...view details