ಮಂಗಳೂರು (ದಕ್ಷಿಣ ಕನ್ನಡ) :ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹೆಚ್ಚಾಗಿ ಅಕ್ರಮವಾಗಿ ಚಿನ್ನ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ನಡುವೆ ವಿದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಭಾರಿ ಪ್ರಮಾಣದ ವಜ್ರವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾರತದಿಂದ ದುಬಾೖಗೆ ಅಕ್ರಮವಾಗಿ ವಿಮಾನದಲ್ಲಿ ವಜ್ರವನ್ನು ಸಾಗಿಸಲು ಯತ್ನಿಸಲಾಗಿತ್ತು. ಸಾಗಾಟ ಮಾಡುತ್ತಿದ್ದವರಿಗೆ ಮುಬೈನಿಂದ ಸಂಪರ್ಕ ಇತ್ತು ಎಂದು ತಿಳಿದು ಬಂದಿದೆ. ಇದರಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಇತ್ತು. ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದುಬೈಗೆ ತೆರಳುತ್ತಿದ್ದ ಭಟ್ಕಳದ ಅನಾಸ್ ಮತ್ತು ಅಮ್ಮರ್ ಎಂಬವರು ತಮ್ಮ ಶೂ ಮತ್ತು ಬ್ಯಾಗ್ನ ಅಡಿ ಅನುಮಾನ ಬಾರದಂತೆ ಅಡಗಿಸಿಟ್ಟು ವಜ್ರವನ್ನು ಸಾಗಣೆ ಮಾಡುತ್ತಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಸಾಗಣೆ ಮಾಡುತ್ತಿದ್ದ ವೇಳೆ ಇಮಿಗ್ರೇಶನ್ ವಿಭಾಗದಲ್ಲಿ ತಪಾಸಣೆ ವೇಳೆ ಅಕ್ರಮ ವಜ್ರ ಸಾಗಣೆ ಪತ್ತೆಯಾಗಿದೆ. ಈ ವಜ್ರವನ್ನು ಮುಂಬೈನಿಂದ ತಂದಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಬದುಕಿದ್ದ ವ್ಯಕ್ತಿಯ ಡೆತ್ ರಿಪೋರ್ಟ್ ಕೊಟ್ಟ ವೈದ್ಯರು.. ಆಘಾತಕ್ಕೊಳಗಾಗಿ ಪ್ರತಿಭಟನೆಗೆ ಕುಳಿತ ರೋಗಿ!
ಅಡುಗೆ ಮಾಡುವ ವಿಚಾರದಲ್ಲಿ ಗಲಾಟೆ ಕೊಲೆ:ಮೊತ್ತೊಂದು ಪ್ರಕರಣ ಮಂಗಳೂರಿನ ಹೊಸಬೆಟ್ಟುವಿನಲ್ಲಿ ನಡೆದಿದ್ದು, ಅಡುಗೆ ಮಾಡುವ ವಿಚಾರದಲ್ಲಿ ನಡೆದ ಜಗಳವೊಂದು ಮುಂದುವರಿದು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರ ರಾಜ್ಯದ ಸಮಸ್ತಿಪುರ್ರೆಬ್ರಾ ನಿವಾಸಿ ಚೋಟು ಕುಮಾರ್ (21) ಮೃತಪಟ್ಟ ವ್ಯಕ್ತಿ.