ಕರ್ನಾಟಕ

karnataka

By

Published : Jul 3, 2021, 6:50 PM IST

ETV Bharat / state

ನಿಂಬೆಹಣ್ಣಿನ ನಡುವೆ ಗಾಂಜಾ ಸಾಗಾಟ... ಕರ್ನಾಟಕ ಪೊಲೀಸರಿಗೆ ಸಿಕ್ಕಿಬಿದ್ದ ಕೇರಳ ಮೂಲದ ಖದೀಮರು

ಪಿಕ್​​ಅಪ್ ವಾಹನದಲ್ಲಿ ನಿಂಬೆಹಣ್ಣು ಜೊತೆ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

2-arrested-for-shipping-40-kg-ganja-among-lemon-filled-truck
ನಿಂಬೆಹಣ್ಣಿನ ನಡುವೆ 40 ಕೆ ಜಿ ಗಾಂಜಾ ಸಾಗಾಟ

ಮಂಗಳೂರು: ನಿಂಬೆಹಣ್ಣು ತುಂಬಿದ್ದ ಪಿಕ್​ಅಪ್ ವಾಹನದಲ್ಲಿ 40 ಕೆ.ಜಿ‌ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ, ಇಬ್ಬರನ್ನು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಕಂಬಲ್ಲೂ‌ರು ನಿವಾಸಿ ಶಿಹಾಬುದ್ದೀನ್ ವಿ.ವಿ(32), ಕಾಡುಮೆನಿ ನಿವಾಸಿ ಲತೀಫ್(38) ಬಂಧಿತ ಆರೋಪಿಗಳು.

ನಗರದ ಕೊಟ್ಟಾರ ಚೌಕಿ ಚೆಕ್​​ಪೋಸ್ಟ್ ಬಳಿ ನಿನ್ನೆ ರಾತ್ರಿ 8 ಗಂಟೆಗೆ ಉರ್ವ ಪೊಲೀಸ್ ಸ್ಟೇಷನ್ ನಿರೀಕ್ಷಕ ಜೋತಿರ್ಲಿಂಗ ಹೊನಕಟ್ಟಿ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಹೇಂದ್ರ ಬೊಲೇರೊ ಪಿಕ್​​ಅಪ್ ವಾಹನದಲ್ಲಿ ನಿಂಬೆಹಣ್ಣು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಪರಿಶೀಲನೆ ನಡೆಸಿದಾಗ 40 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದೆ.

ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ಮಾತನಾಡಿ, ಆರೋಪಿಗಳಿಬ್ಬರಿಂದ 40 ಕೆ.ಜಿ ಗಾಂಜಾ, ಪಿಕ್​​ಅಪ್ ವಾಹನ, ಎರಡು ಮೊಬೈಲ್ ಫೋನ್ ಸಹಿತ 11.17 ಲಕ್ಷ ರೂ. ಮೌಲ್ಯದ ವಸ್ತುಗಳ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ:ಬಿಪಿಸಿಎಲ್ ಪೆಟ್ರೋಲ್ ಬಂಕ್​​ನಲ್ಲಿ ದರೋಡೆ : ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ABOUT THE AUTHOR

...view details