ಕರ್ನಾಟಕ

karnataka

ETV Bharat / state

ದಾರಿ ತಪ್ಪಿಸಿತು ಐವನ್ ಡಿ ಸೋಜಾ ಪ್ರಕಟಣೆ : ರಸ್ತೆಗಿಳಿದ 180ಕ್ಕೂ‌ಅಧಿಕ ವಾಹನಗಳು ಸೀಜ್​​..! - ದಾರಿ ತಪ್ಪಿಸಿತು ಐವನ್ ಡಿಸೋಜ ಪ್ರಕಟಣೆ

ಎಲ್ಲರೂ ಅವರ ಮನೆಯ ಹತ್ತಿರದಲ್ಲಿನ ಅಂಗಡಿಗಳಲ್ಲಿ ಮಾತ್ರ ಖರೀದಿಸಬೇಕು. ಯಾರೂ ವಾಹನ ಬಳಸುವಂತಿಲ್ಲ. ಅನಿವಾರ್ಯತೆ ಇದ್ದರೆ ಮಾತ್ರ ವಾಹನಗಳ ಬಳಕೆ ಮಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ಮಂಗಳೂರಿನಲ್ಲಿ ಆ ಒಂದು ಮೆಸೇಜ್​ ಜನರ ದಾರಿ ತಪ್ಪಿಸಿತ್ತು..

ರೋಡಿಗಿಳಿದ 180ಕ್ಕೂ‌ಅಧಿಕ ವಾಹನಗಳು ಸೀಸ್
ರೋಡಿಗಿಳಿದ 180ಕ್ಕೂ‌ಅಧಿಕ ವಾಹನಗಳು ಸೀಸ್

By

Published : May 10, 2021, 1:08 PM IST

Updated : May 10, 2021, 1:51 PM IST

ಮಂಗಳೂರು :ಬೆಳಗ್ಗೆ 10 ಗಂಟೆಯವರೆಗೆ ವಾಹನ ಬಳಸಿ ಓಡಾಡಬಹುದು ಎಂದು ಮಾಜಿ ಎಂಎಲ್​ಸಿ ಐವನ್​ ಡಿಸೋಜಾ ಅವರು ಹೊರಡಿಸಿದ್ದಪ್ರಕಟಣೆಯೊಂದು ನಾಗರಿಕರ ದಾರಿ ತಪ್ಪಿಸಿದೆ. ಇದರ ಪರಿಣಾಮ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 180ಕ್ಕೂ ಅಧಿಕ ವಾಹನಗಳು ಸೀಜ್​ ಆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ರೋಡಿಗಿಳಿದ 180ಕ್ಕೂ‌ಅಧಿಕ ವಾಹನಗಳು ಸೀಜ್

ನಿನ್ನೆ ವಿಡಿಯೋ ಮೂಲಕ ಸ್ವತಃ‌ ಪೊಲೀಸ್ ಕಮಿಷನರ್ ಅವರೇ ಅನಗತ್ಯ ಯಾರೂ ಸಂಚಾರ ಮಾಡಬಾರದು. ಎಲ್ಲರೂ ಅವರ ಮನೆಯ ಹತ್ತಿರದಲ್ಲಿನ ಅಂಗಡಿಗಳಲ್ಲಿ ಮಾತ್ರ ಖರೀದಿಸಬೇಕು. ಯಾರೂ ವಾಹನ ಬಳಸುವಂತಿಲ್ಲ. ಅನಿವಾರ್ಯತೆ ಇದ್ದರೆ ಮಾತ್ರ ವಾಹನಗಳ ಬಳಕೆ ಮಾಡಬೇಕೆಂದು ಆದೇಶಿಸಿದ್ದರು. ಆದರೆಲಾಕ್‌ಡೌನ್​​ಗೆ​ ಉತ್ತಮ ಬೆಂಬಲ ದೊರಕಿದ್ದ ಮಂಗಳೂರಿನಲ್ಲಿ ಇಂದು ಬೆಳಗ್ಗಿನಿಂದಲೇ ಜನರು ರೋಡಿಗಿಳಿದಿದ್ದಾರೆ.

ಬೆಳಗ್ಗೆ 10ಗಂಟೆಯವರೆಗೆ ವಾಹನ ಉಪಯೋಗಿಸಲು ಯಾವುದೇ ಅಡ್ಡಿಯಿಲ್ಲ ಎಂದು ದ.ಕ. ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.ಈ ಬಗ್ಗೆ ತಾನು ಜಿಲ್ಲಾಧಿಕಾರಿಯವರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿರುವೆ ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿಮಾಜಿ ಎಂಎಲ್ ಸಿ ಐವನ್ ಡಿಸೋಜಾ ಅವರು ಬರೆದುಕೊಂಡಿದ್ದರು.

ಹೀಗಾಗಿ ದಿನಸಿ ಸಾಮಗ್ರಿ, ತರಕಾರಿಗಳನ್ನು ಖರೀದಿಸಲು ವಾಹನಗಳಲ್ಲಿ ಕೆಲವರು ನಗರಕ್ಕೆ ಬಂದಿದ್ದಾರೆ. ಪೊಲೀಸರು ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ಸೀಜ್​ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ : ಅಯ್ಯೋ ದೇವರೇ!!! ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತ ದೇಹಗಳು!

Last Updated : May 10, 2021, 1:51 PM IST

ABOUT THE AUTHOR

...view details