ಮಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಆರಂಭವಾಗಿದೆ, ನಾಳೆ ಮೊದಲ ಬಾರಿಗೆ ದುಬೈನಿಂದ ಮಂಗಳೂರಿಗೆ ವಿಮಾನ ಬರಲಿದೆ. ಈ ವಿಮಾನ ದುಬೈನಿಂದ 177 ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲಿದೆ.
ನಾಳೆ ದುಬೈನಿಂದ ಮಂಗಳೂರಿಗೆ ಬಂದಿಳಿಯಲಿದ್ದಾರೆ 177 ಭಾರತೀಯರು - ದುಬೈನಿಂದ ಮಂಗಳೂರಿಗೆ ವಿಮಾನ
ಮೇ. 12ರ ಸಂಜೆ ದುಬೈನಿಂದ ಹೊರಡುವ ವಿಮಾನ ರಾತ್ರಿ 9.10ಕ್ಕೆ ಮಂಗಳೂರು ತಲುಪಲಿದ್ದು, ಈ ವಿಮಾನ ದುಬೈನಿಂದ 177 ಪ್ರಯಾಣಿಕರನ್ನು ಕರೆ ತರಲಿದೆ.
ಮೇ. 12ರ ಸಂಜೆ ದುಬೈನಿಂದ ಹೊರಡುವ ವಿಮಾನ ರಾತ್ರಿ 9.10ಕ್ಕೆ ಮಂಗಳೂರು ತಲುಪಲಿದೆ. ಏರ್ ಲಿಪ್ಟ್ ಮೂಲಕ ಮಂಗಳೂರಿಗೆ ಬರುವವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರೆಷ್ಟು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಮಂಗಳೂರಿಗೆ ಬರುವ ಪ್ರಯಾಣಿಕರನ್ನು ಮಂಗಳೂರಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ದ. ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಲಾಡ್ಜ್ ಮತ್ತು ಹಾಸ್ಟೆಲ್ ಗಳನ್ನು ಕಾದಿರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಮಂದಿ ಗಲ್ಪ್ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದು, ಕೊರೊನಾ ಲಾಕ್ ಡೌನ್ ಬಳಿಕ ಊರಿಗೆ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ನಾಳೆಯ ವಿಮಾನದಲ್ಲಿ 177 ಮಂದಿ ಮಂಗಳೂರಿಗೆ ತಲುಪಲಿದ್ದಾರೆ.