ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು 6 ಮಂದಿ ಸಾವನ್ನಪ್ಪಿದ್ದು ,177 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು ಮೃತಪಟ್ಟ 6 ಮಂದಿಯಲ್ಲಿ 3 ಮಂದಿ ಮಂಗಳೂರು ತಾಲೂಕು, ಒಬ್ಬರು ಬಂಟ್ವಾಳ ತಾಲೂಕು ಮತ್ತು ಇಬ್ಬರು ಹೊರ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 296 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 177 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ ಮಂಗಳೂರು ತಾಲೂಕಿನ 107, ಬಂಟ್ವಾಳ ತಾಲೂಕಿನ 14, ಪುತ್ತೂರು ತಾಲೂಕಿನ 16, ಸುಳ್ಯ ತಾಲೂಕಿನ12 , ಬೆಳ್ತಂಗಡಿ ತಾಲೂಕಿನ 12 ಮತ್ತು ಹೊರಜಿಲ್ಲೆಯ 16 ಮಂದಿಗೆ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,712 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 187 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 7,129 ಮಂದಿ ಗುಣಮುಖರಾಗಿದ್ದಾರೆ. 2,287 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.