ಮಂಗಳೂರು: ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ದೋಹಾದಿಂದ 170 ಮಂದಿಯನ್ನು ಹೊತ್ತು ತಂದ ಚಾರ್ಟರ್ಡ್ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 4 ಗಂಟೆಗೆ ತಲುಪಿದೆ.
ದೋಹಾದಿಂದ ಮಂಗಳೂರಿಗೆ 170 ಅನಿವಾಸಿ ಕನ್ನಡಿಗರ ಆಗಮನ - ಅನಿವಾಸಿ ಭಾರತೀಯರು
ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರ ನೆರವು ಪಡೆದು ಕತಾರ್ನ ಕೆಸಿಎಫ್ ಸಂಸ್ಥೆಯ ಆಯೋಜನೆಯಿಂದ 170 ಅನಿವಾಸಿ ಕನ್ನಡಿಗರು ಮಂಗಳೂರಿಗೆ ಆಗಮಿಸಿದ್ದಾರೆ.
170 people came from dhoha
ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರ ನೆರವು ಪಡೆದು ಕತಾರ್ನ ಕೆಸಿಎಫ್ ಸಂಸ್ಥೆಯ ಆಯೋಜನೆಯಿಂದ ಈ 170 ಅನಿವಾಸಿ ಕನ್ನಡಿಗರು ಮಂಗಳೂರಿಗೆ ಆಗಮಿಸಿದ್ದಾರೆ.
ಈ ವಿಮಾನದಲ್ಲಿ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡದ ಅನಿವಾಸಿ ಕನ್ನಡಿಗರು ಆಗಮಿಸಿದ್ದು, ಸದ್ಯ ಇವರೆಲ್ಲರೂ ಸಾಂಸ್ಥಿಕ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ.