ಕರ್ನಾಟಕ

karnataka

By

Published : Jun 13, 2021, 10:08 PM IST

ETV Bharat / state

ದಕ್ಷಿಣ ಕನ್ನಡದ 17 ಗ್ರಾಮಗಳು ಲಾಕ್​ಡೌನ್: ಡಿಸಿ ಆದೇಶ

50ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿರುವ ಗ್ರಾಮಗಳನ್ನು ಲಾಕ್​ಡೌನ್ ಮಾಡಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಡಿಸಿ ಆದೇಶ
ಡಿಸಿ ಆದೇಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್​ಡೌನ್​ ಮುಂದುವರಿದಿದೆ. ಈ ಮಧ್ಯೆ ಜಿಲ್ಲೆಯಲ್ಲಿ 50 ಕೊರೊನಾ ಕೇಸ್​ಗಳಿಗಿಂತ ಹೆಚ್ಚಿರುವ 17 ಗ್ರಾಮಗಳನ್ನು ಸೀಲ್​ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಡಿಸಿ ಆದೇಶ ಪ್ರತಿ

ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಡ್ನೂರು, ಕೊಲ್ಲಮೊಗ್ರ, ಗುತ್ತಿಗಾರು ಹಾಗೂ ಅರಂತೋಡು ಹಾಗೂ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಸವಣೂರು ಸೇರಿದಂತೆ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮಗಳನ್ನು ಜೂ. 14 ರಿಂದ 21 ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮಂಗಳೂರಿನ ಗ್ರಾಮಗಳಾದ ನೀರುಮಾರ್ಗ ಹಾಗೂ ಕೊಣಾಜೆ, ಬೆಳ್ತಂಗಡಿ ತಾಲೂಕಿಗೆ ಒಳಪಡುವ ನಾರಾವಿ,ಕೆಯ್ಯೂರು, ಮಿತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ, ಚಾರ್ಮಾಡಿ ಕೂಡಾ ಸಂಪೂರ್ಣವಾಗಿ ಲಾಕ್ ಆಗಲಿವೆ.

ಡಿಸಿ ಆದೇಶ ಪ್ರತಿ

ಈ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೆ, ಹಾಲಿನ ಬೂತ್, ಹಾಲು ಸೊಸೈಟಿಗಳಲ್ಲಿ ಹಾಲು ಖರೀದಿ, ಪೆಟ್ರೋಲ್ ಪಂಪ್, ತುರ್ತು ಸೇವಾ ವಾಹನಗಳಿಗೆ ಬಿಟ್ಟು ಉಳಿದ ಯಾವುದೇ ಚಟುವಟಿಕೆಗಳಿಗೆ ಆಸ್ಪದ ಇಲ್ಲವೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ABOUT THE AUTHOR

...view details