ಮಂಗಳೂರು: ಇಂದು ಜಿಲ್ಲೆಯಲ್ಲಿ 11 ಪುರುಷರು, 5 ಮಹಿಳೆಯರು ಕೊರೊನಾ ಕಂಟಕದಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ಮಂಗಳೂರು: ಕೊರೊನಾ ಕಂಟಕದಿಂದ 16 ಮಂದಿ ಗುಣಮುಖ
ಇಂದು ಜಿಲ್ಲೆಯಲ್ಲಿ 11 ಪುರುಷರು, 5 ಮಹಿಳೆಯರು ಕೊರೊನಾ ಕಂಟಕದಿಂದ ಗುಣಮುಖರಾಗಿ ಮನೆ ಸೇರಿದ್ದಾರೆ. ಈವರೆಗೆ ಒಟ್ಟು 218 ಪ್ರಕರಣಗಳು ಪತ್ತೆಯಾಗಿದ್ದು, 115 ಮಂದಿ ಗುಣಮುಖರಾಗಿದ್ದಾರೆ.
Recovered from corona
ಕೊರೊನಾ ಪಾಸಿಟಿವ್ ದೃಢಪಟ್ಟ ಬಳಿಕ ಜಿಲ್ಲೆಯ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ವರದಿ ನೆಗೆಟಿವ್ ಬಂದ ಹಿನ್ನೆಲೆ, ಇವರೆಲ್ಲರನ್ನು ಗುಣಮುಖರೆಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 218 ಪ್ರಕರಣಗಳು ಪತ್ತೆಯಾಗಿದ್ದು, 115 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದು, 96 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಇಂದು 95 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.