ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು 8 ಮಂದಿ ಸಾವನ್ನಪ್ಪಿದ್ದು, ಹೊಸದಾಗಿ 152 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ 8 ಮಂದಿಯಲ್ಲಿ ಮೂವರು ಮಂಗಳೂರು ತಾಲೂಕು, ಒಬ್ಬರು ಪುತ್ತೂರು ತಾಲೂಕು ಹಾಗೂ ಉಳಿದ 4 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 409ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 152 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇದರಲ್ಲಿ 71 ಮಂದಿ ಮಂಗಳೂರು ತಾಲೂಕು, 32 ಮಂದಿ ಬಂಟ್ವಾಳ ತಾಲೂಕು, 18 ಮಂದಿ ಪುತ್ತೂರು ತಾಲೂಕು, 16 ಮಂದಿ ಸುಳ್ಯ ತಾಲೂಕು, 9 ಮಂದಿ ಬೆಳ್ತಂಗಡಿ ತಾಲೂಕು ಮತ್ತು 6 ಮಂದಿ ಹೊರಜಿಲ್ಲೆಯವರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಕೊರೊನಾ ದೃಢಪಟ್ಟವರ ಸಂಖ್ಯೆ 15,078 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 313 ಮಂದಿ ಗುಣಮುಖರಾಗಿದ್ದು ಈವರೆಗೆ ಒಟ್ಟು 11,754 ಮಂದಿ ಗುಣಮುಖರಾಗಿದ್ದಾರೆ. ಉಳಿದ 2,915 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.