ಕರ್ನಾಟಕ

karnataka

ETV Bharat / state

ನೇತ್ರಾವತಿ ನದಿಮಟ್ಟದಲ್ಲಿ ಏರಿಳಿತ: ಬಂಟ್ವಾಳದ 15 ಗ್ರಾಮಗಳು ಪ್ರವಾಹ ಪೀಡಿತ - ಬಂಟ್ವಾಳ ಧಾರಾಕಾರ ಮಳೆ

ಬಂಟ್ವಾಳ ಸುತ್ತಮುತ್ತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಳಿತವಾಗುತ್ತಿದೆ.

Bantwal
ನೇತ್ರಾವತಿ ನದಿಮಟ್ಟದಲ್ಲಿ ಏರಿಳಿತ

By

Published : Aug 9, 2020, 10:27 PM IST

ಬಂಟ್ವಾಳ: ಬಂಟ್ವಾಳ ಸುತ್ತಮುತ್ತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಳಿತವಾಗುತ್ತಿದೆ. ತಾಲೂಕಿನ ಒಟ್ಟು 15 ಗ್ರಾಮಗಳು ಈಗ ಪ್ರವಾಹಪೀಡಿತವಾಗಿವೆ.

ಭಾರಿ ಮಳೆಯಿಂದ ನೇತ್ರಾವತಿ ನದಿಮಟ್ಟದಲ್ಲಿ ಏರಿಳಿತ

ಶನಿವಾರ ಬೆಳಗ್ಗೆ ನದಿ ಉಕ್ಕಿ ಆತಂಕ ಸೃಷ್ಟಿಸಿದ್ದರೂ, ಸಂಜೆ ಇಳಿಮುಖವಾಗಿತ್ತು. ಶನಿವಾರ 9.3 ಮೀಟರ್ ಎತ್ತರ (ಅಪಾಯದ ಮಟ್ಟ 8.5 ಮೀ.)ದಲ್ಲಿ ಹರಿಯುತ್ತಿದ್ದ ನೇತ್ರಾವತಿ ಭಾನುವಾರ ಬೆಳಗ್ಗೆ 6.7 ಮೀ ಇದ್ದರೆ, ಬಳಿಕ 6.4ಕ್ಕೆ ಇಳಿಯಿತು. ಮಧ್ಯಾಹ್ನ 6.7 ಮೀ.ಗೆ ಏರಿಕೆಯಾದರೆ, ಸಂಜೆ 6.5 ಮೀ.ಗೆ ಇಳಿಯಿತು. ತಾಲೂಕಿನಾದ್ಯಂತ 8.63 ಸೆಂ.ಮೀ.ಮಳೆಯಾಗಿದೆ.

ನದಿ ಪಾತ್ರದಲ್ಲಿ ಬರುವ 15 ಗ್ರಾಮಗಳ ಸುಮಾರು 510 ಮನೆಗಳ 2,487 ಮಂದಿಯನ್ನು ಪ್ರವಾಹ ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದು, ಶನಿವಾರ ಅವರಲ್ಲಿ 52 ಮನೆಗಳ 253 ಮಂದಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ABOUT THE AUTHOR

...view details