ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 8 ಮಂದಿ ಸಾವು, 144 ಪಾಸಿಟಿವ್

ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಇಂದು 8 ಮಂದಿ ಸಾವನ್ನಪ್ಪಿದ್ದಾರೆ.

Mangalore
Mangalore

By

Published : Aug 17, 2020, 8:48 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು 8 ಮಂದಿ ಸಾವನ್ನಪ್ಪಿದ್ದು, 144 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಇಂದು ಸಾವನ್ನಪ್ಪಿದ 8 ಮಂದಿಯಲ್ಲಿ 3 ಮಂದಿ ಮಂಗಳೂರು ತಾಲೂಕು, ಒಬ್ಬರು ಬಂಟ್ವಾಳ ತಾಲೂಕು, ಒಬ್ಬರು ಪುತ್ತೂರು ತಾಲೂಕು ಮತ್ತು ಹೊರ ಜಿಲ್ಲೆಯವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 144 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ ಮಂಗಳೂರು ತಾಲೂಕಿನ 88 ಮಂದಿ, ಬಂಟ್ವಾಳ ತಾಲೂಕಿನ 18, ಪುತ್ತೂರು ತಾಲೂಕಿನ 8 , ಸುಳ್ಯ ತಾಲೂಕಿನ 1, ಬೆಳ್ತಂಗಡಿ ತಾಲೂಕಿನ 10 ಮತ್ತು ಹೊರಜಿಲ್ಲೆಯ 19 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ 9,022 ಮಂದಿಗೆ ಈವರೆಗೆ ಕೊರೊನಾ ದೃಢಪಟ್ಟಿದೆ.

ಜಿಲ್ಲೆಯಲ್ಲಿ 209 ಮಂದಿ ಇಂದು ಗುಣಮುಖರಾಗಿದ್ದು ಈವರೆಗೆ 6,654 ಮಂದಿ ಗುಣಮುಖರಾಗಿದ್ದಾರೆ. 2091 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details