ಕರ್ನಾಟಕ

karnataka

ETV Bharat / state

ರಸ್ತೆ ಬದಿ ನಿಂತಿದ್ದಾಗ ಕಾರು ಢಿಕ್ಕಿ: ಉಳ್ಳಾಲದಲ್ಲಿ ಬಾಲಕ ಸಾವು - spot death

ವಿದ್ಯಾರ್ಥಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

a-14-year-old-boy-died-in-a-car-accident-in-ullala
ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಕೊನೆಯುಸಿರೆಳೆದ ಬಾಲಕ

By

Published : Dec 27, 2022, 10:57 PM IST

ಉಳ್ಳಾಲ: ರಸ್ತೆ ಬದಿ ನಿಂತಿದ್ದ ಎಂಟನೇ ತರಗತಿ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಬೋಳಿಯಾರು ಭಟ್ರಬೈಲು ನಿವಾಸಿ ಹರಿಶ್ಚಂದ್ರ-ಅರುಣಾಕ್ಷಿ ದಂಪತಿಯ ಪುತ್ರ ಕಾರ್ತಿಕ್ (14) ಮೃತ ಬಾಲಕ. ಮುಡಿಪು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಶಾಲೆಯಿಂದ ಮರಳಿ ಮನೆಗೆ ತೆರಳಲು ರಸ್ತೆಬದಿಯಲ್ಲಿ ನಿಂತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.

ಕಾರು ಚಾಲಕನ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಾಲಕನಿಗೆ ಡಿಕ್ಕಿ ಹೊಡೆದ ಕಾರು ನಂತರ ಸಮೀಪದಲ್ಲೇ ಇದ್ದ ರಿಕ್ಷಾಗೂ ಗುದ್ದಿದೆ. ಕಾರು ಮಾಲೀಕ ಟ್ರಯಲ್ ನೋಡಲು ಇನ್ನೋರ್ವ ಗೆಳೆಯನಿಗೆ ಕಾರು ನೀಡಿದ್ದೇ ಘಟನೆ ಕಾರಣವಾಗಿದೆ. ಮಂಗಳೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು, ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ABOUT THE AUTHOR

...view details