ಬೆಳ್ತಂಗಡಿ(ದಕ್ಷಿಣ ಕನ್ನಡ):ಸ್ನಾನಗೃಹದ ಒಳಗೆ ಅವಿತಿದ್ದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಅಳದಂಗಡಿಯ ಕೆದ್ದುವಿನಲ್ಲಿ ನಡೆದಿದೆ.
ಅಳದಂಗಡಿ, ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಎಂಬುವರ ಜಿಕೆ ಫಾರ್ಮ್ಸ್ ಮನೆಯ ಸ್ನಾನದ ಗೃಹದಲ್ಲಿ ಕಾಳಿಂಗ ಸರ್ಪವೊಂದು ಅಡಗಿಕೊಂಡಿತ್ತು. ಇಂದು ಬೆಳಗ್ಗೆ ಮನೆಯವರು ಸ್ನಾನಗೃಹಕ್ಕೆ ಹೋದ ಸಮಯದಲ್ಲಿ ಶಬ್ದ ಕೇಳಿಸಿದೆ. ಬಳಿಕ ಪರಿಶೀಲನೆ ಮಾಡಿದಾಗ ಕಾಳಿಂಗ ಸರ್ಪ ಇರುವುದು ಖಾತ್ರಿಯಾಗಿತ್ತು. ಕೂಡಲೇ ಲಾಯಿಲದ ಉರಗ ಪ್ರೇಮಿ, ಸ್ನೇಕ್ ಅಶೋಕ್ಗೆ ಕರೆ ಮಾಡಿ ಮನೆಗೆ ಕರೆಸಿದ್ದರು.