ಮಂಗಳೂರು:ನಗರದ ಹೋಟೆಲ್ವೊಂದರಲ್ಲಿ ಆಹಾರ ಸೇವಿಸಿದ ಕೇರಳದ ಕಾಸರಗೋಡಿನ 12 ನಿವಾಸಿಗಳು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿ.ಪಂ ಸದಸ್ಯ ಹರ್ಷಾದ್ ವರ್ಕಾಡಿ ಪ್ರತಿಭಟನೆ ನಡೆಸಿ, ಹೋಟೆಲ್ ಬಂದ್ ಮಾಡಿಸಿದ್ದಾರೆ.
ಆಹಾರ ಸೇವಿಸಿ 12 ಮಂದಿ ಅಸ್ವಸ್ಥ: ಮಂಗಳೂರಲ್ಲಿ ಹೋಟೆಲ್ನ್ನೇ ಮುಚ್ಚಿಸಿದ ಕೇರಳ ಜಿ.ಪಂ ಸದಸ್ಯ - ಹೋಟೆಲ್
ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿರುವ ಪಾಪ್ ಟೇಟ್ಸ್ ಎಂಬ ಹೋಟೆಲ್ನಲ್ಲಿ ಜೂನ್ 24 ರಂದು ಕೇರಳದ ಕಾಸರಗೋಡು ನಿವಾಸಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದರು ಎನ್ನಲಾಗ್ತಿದೆ. ಈಗ ಇದನ್ನು ಜಿ.ಪಂ. ಸದಸ್ಯರೋರ್ವರು ಬಯಲು ಮಾಡಿ ಹೊಟೆಲ್ನ್ನೇ ಮುಚ್ಚಿಸಿದ್ದಾರೆ.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿರುವ ಪಾಪ್ ಟೇಟ್ಸ್ ಎಂಬ ಹೋಟೆಲ್ನಲ್ಲಿ ಜೂನ್ 24 ರಂದು ಕೇರಳದ ಕಾಸರಗೋಡು ನಿವಾಸಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದರು ಎನ್ನಲಾಗ್ತಿದೆ. ಕೇರಳದ ಸುಮಾರು 12 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಆರೋಪಿಸಿದ ಕಾಸರಗೋಡು ಜಿ.ಪಂ ಸದಸ್ಯ ಹರ್ಷಾದ್ ವರ್ಕಾಡಿ ಅವರು ಹೋಟೆಲ್ ಬಂದ್ ಮಾಡುವಂತೆ ನಿನ್ನೆ ರಾತ್ರಿ ಹೋಟೆಲ್ ಎದುರು ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ತೆರೆದಿದ್ದ ಹೋಟೆಲ್ ಬಂದ್ ಮಾಡಲಾಯಿತು. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಂದ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ನೇತೃತ್ವದ ತಂಡ ಹೋಟೆಲ್ಗೆ ಬೀಗ ಹಾಕಿ ತೆರಳಿದೆ.