ಬೆಳ್ತಂಗಡಿ:ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಶಿವರಾತ್ರಿ ಹಬ್ಬಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳಿಗೆ ಡಿಕ್ಕಿ ಹೊಡೆದು ಕಂದಕಕ್ಕೆ ನುಗ್ಗಿರುವ ಘಟನೆ ಮಂಗಳೂರು-ಚಿಕ್ಮಮಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯ ಮೊದಲ ಹಿಮ್ಮುರಿ ತಿರುವಿನ ಸಮೀಪ ನಡೆದಿದೆ.
ಅಪಘಾತದಲ್ಲಿ ಇಬ್ಬರು ಶಿವರಾತ್ರಿ ಪಾದಯಾತ್ರಿಗಳು ಹಾಗೂ ಟಿ.ಟಿ.ಯಲ್ಲಿದ್ದ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವರಾತ್ರಿ ಪಾದಯಾತ್ರೆಗಳಾದ ಹಾಸನದ ಅರ್ಜುನ್ ಕುಮಾರ್(29), ಧನರಾಜ್(16) ಹಾಗೂ ಟಿ.ಟಿ ಪ್ರಯಾಣಿಕರಾದ ದಿಲೀಪ್(19), ವಿಶ್ವನಾಥ(18),ಲಾವಣ್ಯ(18), ಐಶ್ವರ್ಯಾ(21), ಶ್ರೇಯಾ(18), ಯಕ್ಷಿತ್(21), ಯತೀಶ್ (21), ಅನನ್ಯಾ(19) ಹಾಗೂ ಚಾಲಕ ರಾಜೇಶ್(32) ಎಂದು ಗುರುತಿಸಲಾಗಿದೆ.