ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1755 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ದ.ಕ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 1175 ಕೊರೊನಾ ಪಾಸಿಟಿವ್ ಪ್ರಕರಣ - mangalore news
ಎರಡನೇ ಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಪ್ರತಿದಿನ 500 ರಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಈಗ ಪಾಸಿಟಿವ್ ಪ್ರಕರಣ ಸಾವಿರದ ಗಡಿ ದಾಟಿದೆ.
ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಕೊರೊನಾ ಪಾಸಿಟಿವ್ ಪತ್ತೆ ಪ್ರಕರಣಗಳಲ್ಲಿ ನಿನ್ನೆ ಪತ್ತೆಯಾದ ಪ್ರಕರಣ ಅತ್ಯಧಿಕವಾಗಿದೆ. ಎರಡನೇ ಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಪ್ರತಿದಿನ 500 ರಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಈಗ ಪಾಸಿಟಿವ್ ಪ್ರಕರಣ ಸಾವಿರದ ಗಡಿ ದಾಟಿದೆ.
1175 ಪ್ರಕರಣ ದಾಖಲಾಗಿದ್ದರೆ ಓರ್ವ ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5662 ಸಕ್ರಿಯ ಪ್ರಕರಣಗಳಿದ್ದು, 206 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 43904 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಇದರಲ್ಲಿ ಒಟ್ಟು 37486 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 756 ಮಂದಿ ಸಾವನ್ನಪ್ಪಿದ್ದಾರೆ.