ಸುಳ್ಯ (ದಕ್ಷಿಣ ಕನ್ನಡ): ಹಲವಾರು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಮಾಡಾವು 110 ಕಿಲೋ ವ್ಯಾಟ್ ವಿದ್ಯುತ್ ಸ್ಥಾವರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶಾಸಕ ಎಸ್. ಅಂಗಾರ ವಿದ್ಯುತ್ ಸ್ಥಾವರಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದಾರೆ.
ಸುಳ್ಯದ ಮಾಡಾವು 110 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಚಾಲನೆ ನೀಡಿದ ಶಾಸಕ ಎಸ್. ಅಂಗಾರ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಾಡಾವು 110 ಕಿಲೋ ವ್ಯಾಟ್ ವಿದ್ಯುತ್ ಸ್ಥಾವರದ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ಎಸ್. ಅಂಗಾರ ಚಾಲನೆ ನೀಡಿದ್ದಾರೆ.
ಶಾಸಕ ಎಸ್. ಅಂಗಾರ
ವಿದ್ಯುತ್ ಸ್ಥಾವರ ಕಾಮಗಾರಿ ಪೂರ್ಣವಾದ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು, ತಂತ್ರಜ್ಞರು ಸ್ಥಳಕ್ಕೆ ಆಗಮಿಸಿ ಅಂತಿಮ ಪರಿಶೀಲನೆ ನಡೆಸಿದರು. ನಂತರ ವಿದ್ಯುತ್ ಸ್ಥಾವರಕ್ಕೆ ಶಾಸಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.