ಕರ್ನಾಟಕ

karnataka

ETV Bharat / state

ದ. ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 11 ಬಲಿ; 173 ಮಂದಿಗೆ ಸೋಂಕು! - Mangalore latest news

ಜಿಲ್ಲೆಯ ಮೇಲೆ ಕೊರೊನಾ ಕೆಂಗಣ್ಣು ಬಿದ್ದಿದ್ದು ಇಂದು ಬರೋಬ್ಬರಿ 11 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 201 ಮತ್ತು ಸೋಂಕಿತರ ಸಂಖ್ಯೆ 6715 ಕ್ಕೆ ಏರಿಕೆಯಾಗಿದೆ.

Dakshina Kannada corona case
Dakshina Kannada corona case

By

Published : Aug 6, 2020, 8:39 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಇಂದು ಒಂದೇ ದಿನ 11 ಮಂದಿ ಮೃತಪಟ್ಟಿದ್ದಾರೆ. ಹಾಗು 173 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎಲ್ಲೆಡೆ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ಜಿಲ್ಲೆಯಲ್ಲಿಂದು ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಮೂಲಕ ಮೃತರ ಸಂಖ್ಯೆ 201ಕ್ಕೆ ಏರಿಕೆಯಾಗಿದೆ. ಈ ಪೈಕಿ ಆರು ಮಂದಿ ಮಂಗಳೂರು ತಾಲೂಕಿನವರಾದರೆ, ಇಬ್ಬರು ಬಂಟ್ವಾಳ ತಾಲೂಕಿನವರಾಗಿದ್ದಾರೆ. ಮೂವರು ಹೊರ ಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು 173 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಮಂಗಳೂರು ತಾಲೂಕಿನ 119, ಮೂಡಬಿದ್ರೆ ತಾಲೂಕಿನ 4, ಮುಲ್ಕಿ ತಾಲೂಕಿನ 1, ಬಂಟ್ವಾಳ ತಾಲೂಕಿನ 21, ಬೆಳ್ತಂಗಡಿ ತಾಲೂಕಿನ 4, ಪುತ್ತೂರು ತಾಲೂಕಿನ 13, ಕಡಬ ತಾಲೂಕಿನ 2, ಸುಳ್ಯ ತಾಲೂಕಿನ 5 ಮತ್ತು ಹೊರಜಿಲ್ಲೆಯ 4 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇವರಲ್ಲಿ 83 ಐಎಲ್ಐ ಪ್ರಕರಣ, 13 ಎಸ್ ಎ ಆರ್ ಐ ಪ್ರಕರಣ, 23 ಪ್ರಾಥಮಿಕ ಸಂಪರ್ಕದಿಂದ, 4 ವಿದೇಶ ಪ್ರವಾಸದಿಂದ ಬಂದವರಾಗಿದ್ದಾರೆ. ಉಳಿದ 50 ಮಂದಿಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ 6715 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಇಂದು 107 ಮಂದಿ ಗುಣಮುಖರಾಗಿದ್ದು ಈವರೆಗೆ ಸೋಂಕಿನಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆ 3116ಕ್ಕೆ ತಲುಪಿದೆ. ಸದ್ಯ 3398 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details