ಕರ್ನಾಟಕ

karnataka

ETV Bharat / state

ಮನೆಯಲ್ಲಿ ಓದ್ಕೋ ಅಂತಾ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ! - ಮಂಗಳೂರಿನಲ್ಲಿ 5 ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ

ಮನೆಯಲ್ಲಿ ಓದಲು ಹೇಳಿದ್ದಕ್ಕೆ ಹತ್ತು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಿನ್ನಿಗೋಳಿಯ ಐಕಳ ಎಂಬಲ್ಲಿ ನಡೆದಿದೆ.

ಮನೆಯಲ್ಲಿ ಓದು ಎಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ..
ಮನೆಯಲ್ಲಿ ಓದು ಎಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ..

By

Published : Nov 27, 2019, 11:16 PM IST

ದಕ್ಷಿಣ ಕನ್ನಡ: ಮನೆಯಲ್ಲಿ ಓದಲು ಹೇಳಿದ್ದಕ್ಕೆ ಹತ್ತು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಿನ್ನಿಗೋಳಿಯ ಐಕಳ ಎಂಬಲ್ಲಿ ನಡೆದಿದೆ. 5ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಧ್ರುವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದು, ಈಕೆ ಕಮ್ಮಾಜೆ ನಿವಾಸಿ ಗೋವಿಂದ ಎಂಬುವರ ಪುತ್ರಿ ಎಂದು ತಿಳಿದು ಬಂದಿದೆ.‌

ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಅಜ್ಜಿಯೊಂದಿಗೆ ಟಿವಿ ನೋಡುತ್ತಿದ್ದಳಂತೆ. ಆಗ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಬಾಲಕಿಗೆ ಅಜ್ಜಿ ಓದಿಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಅಸಮಾಧಾನಗೊಂಡು ಕೋಣೆಗೆ ಹೋದ ಬಾಲಕಿ, ಕೂದಲನ್ನು ಕಟ್ಟುವ ರಿಬ್ಬನ್​​ ಕಿಟಕಿಗೆ ಕಟ್ಟಿ ಕುತ್ತಿಗೆಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ವಿದ್ಯುತ್ ಸಂಪರ್ಕ ಮತ್ತೆ ಬಂದಾಗಲು ಬಾಲಕಿ ಹೊರಗೆ ಬಂದಿಲ್ಲ. ಇದರಿಂದ ಅನುಮಾನಗೊಂಡು ಕೋಣೆಯಲ್ಲಿ ಇಣುಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇನ್ನು ಈ ಕುರಿತಾಗಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details