ಕರ್ನಾಟಕ

karnataka

ETV Bharat / state

ಹಿಜಾಬ್ ವಿವಾದದ ಬಳಿಕ ಮಂಗಳೂರು ವಿವಿ ಕಾಲೇಜಿಗೆ 10 ಮುಸ್ಲಿಂ ವಿದ್ಯಾರ್ಥಿನಿಯರ ಸೇರ್ಪಡೆ - ಮಂಗಳೂರು ವಿಶ್ವವಿದ್ಯಾಲಯ

ಕಳೆದ ವರ್ಷ ವಿವಿ ಕಾಲೇಜು ಒಟ್ಟು 44 ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊಂದಿತ್ತು. ಕ್ಯಾಂಪಸ್‌ನಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ನಂತರ, 7 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದರು.

Mangaluru VV College
ಮಂಗಳೂರು ವಿವಿ ಕಾಲೇಜು

By

Published : Aug 18, 2022, 11:49 AM IST

ಮಂಗಳೂರು: ಹಿಜಾಬ್ ವಿವಾದದ ಬಳಿಕವು ಮಂಗಳೂರು ವಿಶ್ವವಿದ್ಯಾಲಯದ ಅಧೀನದ ಹಂಪನಕಟ್ಟೆಯ ವಿಶ್ವವಿದ್ಯಾಲಯದ ಕಾಲೇಜಿಗೆ 10 ಮುಸ್ಲಿಂ ವಿದ್ಯಾರ್ಥಿನಿಯರು ಸೇರ್ಪಡೆಗೊಂಡಿದ್ದಾರೆ. ಹಿಜಾಬ್ ವಿವಾದದಿಂದಾಗಿ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರ ಸೇರ್ಪಡೆ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದನ್ನು ತೋರಿಸಿದೆ.

ಕಳೆದ ವರ್ಷ ವಿವಿ ಕಾಲೇಜು ಒಟ್ಟು 44 ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊಂದಿತ್ತು. ಕ್ಯಾಂಪಸ್‌ನಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ನಂತರ, 7 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದಾರೆ. ಈ ವರ್ಷದಲ್ಲಿ 10 ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ಸೇರ್ಪಡೆಯಾಗಿದ್ದಾರೆ.

ಹಿಜಾಬ್ ವಿಚಾರವಾಗಿ ಕ್ಯಾಂಪಸ್‌ನಲ್ಲಿ ಸದ್ಯ ಯಾವುದೇ ಸಮಸ್ಯೆಗಳಿಲ್ಲ ಮತ್ತು ಸಹಜ ಸ್ಥಿತಿಗೆ ಮರಳುತ್ತಿದೆ. ಈಗಾಗಲೇ ಉಂಟಾದ ಹಿಜಾಬ್ ವಿವಾದದ ಬಳಿಕ ಕಾಲೇಜು ತೊರೆದ ಏಳು ವಿದ್ಯಾರ್ಥಿನಿಯರಲ್ಲಿ ಮೂವರು ವಿದ್ಯಾರ್ಥಿನಿಯರು ಕೊಡಿಯಾಲ್ ಬೈಲ್​ನ ಖಾಸಗಿ ಕಾಲೇಜಿಗೆ ಸೇರುವ ಪ್ರಯತ್ನದಲ್ಲಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ತಮ್ಮ ಆದ್ಯತೆಯ ವಿಷಯ ಸಂಯೋಜನೆ ಸಿಗದ ಕಾರಣ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಒಬ್ಬರು ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಹಿಜಾಬ್ ವಿವಾದ: ಟಿಸಿ ಪಡೆದ ಮಂಗಳೂರು ವಿ ವಿ ಕಾಲೇಜಿನ ವಿದ್ಯಾರ್ಥಿನಿ

ABOUT THE AUTHOR

...view details