ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಇಂದು 10 ಜನ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 169ಕ್ಕೆ ಏರಿದೆ. ಅಲ್ಲದೆ 163 ಜನರ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ದ.ಕ. ಜಿಲ್ಲೆ; ಕೊರೊನಾಗೆ ಇಂದು 10 ಜನ ಬಲಿ.. 163 ಮಂದಿ ಹೊಸ ಸೋಂಕಿತರು - Dakshinkannada corona news
ದ.ಕ. ಜಿಲ್ಲೆಯಲ್ಲಿ ಇಂದು 10 ಜನರು ಬಲಿಯಾಗಿದ್ದು, ಅಲ್ಲದೆ 163 ಜನರ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಮಂಗಳೂರಿನಲ್ಲಿ 107 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ 13, ಬೆಳ್ತಂಗಡಿಯಲ್ಲಿ 19, ಪುತ್ತೂರಿನಲ್ಲಿ 11, ಸುಳ್ಯದಲ್ಲಿ ಓರ್ವರಿಗೆ ಸೋಂಕು ಪತ್ತೆಯಾಗಿದೆ. ಅದಲ್ಲದೆ ಹೊರ ಜಿಲ್ಲೆಯಿಂದ ಬಂದಿರುವ 9 ಮಂದಿ ಹಾಗೂ ಹೊರ ರಾಜ್ಯದಿಂದ ಬಂದಿರುವ ಮೂವರಲ್ಲಿ ಸೋಂಕು ದೃಢಗೊಂಡಿದೆ.
ದ.ಕ. ಜಿಲ್ಲೆಯಲ್ಲಿ ಇಂದು ಸೋಂಕಿನಿಂದ ಗುಣಮುಖರಾಗಿ 45 ಮಂದಿ ಮನೆಗೆ ತೆರಳಿದ್ದಾರೆ. ದ.ಕ. ಜಿಲ್ಲೆಯಲ್ಲಿ ಈವರೆಗೆ 6,015 ಮಂದಿಯಲ್ಲಿ ಸೋಂಕು ತಗುಲಿದ್ದು, ಅದರಲ್ಲಿ 3,116 ಮಂದಿ ಸೋಂಕಿತರು ಕ್ವಾರಂಟೈನ್ನಲ್ಲಿದ್ದಾರೆ. 2,730 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.